ಹೂವಿನಹಡಗಲಿ: ಪಟ್ಟಣದಲ್ಲಿ ಪೊಲೀಸ್ ಇಲಾಖೆಯಿಂದ ಶುಕ್ರವಾರ ಬೈಕ್ ಸವಾರರಿಗೆ ಹೆಲ್ಮೆಟ್ ಜಾಗೃತಿ ಮೂಡಿಸಲಾಯಿತು.

ಹಳೇ ಬಸ್ ನಿಲ್ದಾಣ, ಶಾಸ್ತ್ರಿ ಸರ್ಕಲ್, ಪೊಲೀಸ್ ಠಾಣೆ ಮುಂಭಾಗದಲ್ಲಿ ದ್ವಿಚಕ್ರ ವಾಹನಗಳನ್ನು ತಡೆದು ಜಾಗೃತಿ ಮೂಡಿಸಲಾಯಿತು. ಕೆಲವರಿಗೆ ಹೆಲ್ಮೆಟ್ ವಿತರಿಸಿ ಅರಿವು ಮೂಡಿಸಲಾಯಿತು.

‘ಬಿಸಿಲು ಕಾಲದಲ್ಲಿ ಹೆಲ್ಮೆಟ್ ಧರಿಸುವುದರಿಂದ ಆರೋಗ್ಯಕ್ಕೆ ತೊಂದರೆಯಾಗುತ್ತದೆ ಎಂಬುದು ತಪ್ಪು ಕಲ್ಪನೆ. ಅಪಘಾತ ಸಂದರ್ಭಗಳಲ್ಲಿ ತಲೆಗೆ ಪೆಟ್ಟು ಬೀಳುವುದರಿಂದಲೇ ಹೆಚ್ಚಾಗಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಬೈಕ್ ಚಾಲನೆಯಲ್ಲಿ ಹೆಲ್ಮೆಟ್ ಧರಿಸುವುದು ಪ್ರಾಣ ರಕ್ಷಣೆಗೆ ರಕ್ಷಾ ಕವಚವಾಗಲಿದೆ’ ಎಂದು ಪಿಎಸ್ಐ ಮಣಿಕಂಠ ಹೇಳಿದರು.

ಎಎಸ್ಐ ನಂದಿನಿ, ಕಾನ್ಸ್ಟೆಬಲ್ ಗುರುಬಸವರಾಜ, ಪರಶುರಾಮ, ಖಲಂದರ್, ಪ್ರಭಣ್ಣ, ಮಲ್ಲೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-25-1929086814

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.