ಹೂವಿನಹಡಗಲಿ: ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಗೆ ಸರ್ಕಾರ ಹಲವು ವರ್ಷಗಳಿಂದ ಕಾಯಂ ಅಧಿಕಾರಿ ನೇಮಿಸಿಲ್ಲ. ಅಗತ್ಯ ಸಿಬ್ಬಂದಿಯೂ ಇಲ್ಲ. ಹೀಗಾಗಿ ಭೂ ಸ್ವಾಧೀನ ಪ್ರಕ್ರಿಯೆಗಳು ಕಾಲಮಿತಿಯಲ್ಲಿ ನಡೆಯದೇ ರೈತರಿಗೆ ಭೂ ಪರಿಹಾರ ಮರೀಚಿಕೆಯಾಗಿದೆ.

ಸಿಂಗಟಾಲೂರು ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ 2005ರಲ್ಲಿ ಸರ್ಕಾರ ಪಟ್ಟಣದಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿ ತೆರೆದಿದೆ. ಇವರೆಗೆ 28 ಅಧಿಕಾರಿಗಳು ಭೂಸ್ವಾಧೀನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಐದು ಜನರು ಮಾತ್ರ ಕಾಯಂ ಅಧಿಕಾರಿಗಳಾಗಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಿದ್ದು, ಉಳಿದ ಅವಧಿಯಲ್ಲಿ ಉಪ ವಿಭಾಗಾಧಿಕಾರಿ ಇದ್ದವರೇ ‘ಪ್ರಭಾರ’ ನಿರ್ವಹಿಸಿದ್ದಾರೆ.

‘ಪ್ರಾರಂಭದಲ್ಲಿ ಮಾತ್ರ ಕಾಯಂ ಅಧಿಕಾರಿ ನೇಮಿಸಿ ಭೂ ಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿದ್ದ ಸರ್ಕಾರ, ಬ್ಯಾರೇಜ್ ನಿರ್ಮಾಣ, ಕಾಲುವೆ ನಿರ್ಮಾಣ ಕೆಲಸ ಮುಗಿಯುತ್ತಿದ್ದಂತೆ ಈ ಯೋಜನೆ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದೆ’ ಎಂದು ರೈತರು ಆರೋಪಿಸುತ್ತಿದ್ದಾರೆ.

ಈ ಯೋಜನೆಯಲ್ಲಿ ಮುಳುಗಡೆಯಾಗುವ ಕೃಷಿ ಭೂಮಿ, ಕಾಲುವೆ ನಿರ್ಮಾಣ, ಸ್ಥಳಾಂತರ ನವ ಗ್ರಾಮಗಳ ನಿರ್ಮಾಣಕ್ಕೆ ಬಲದಂಡೆಯ ಹೂವಿನಹಡಗಲಿ ತಾಲ್ಲೂಕಿನಲ್ಲಿ 2,411 ಎಕರೆ 38 ಸೆಂಟ್ಸ್ ಜಮೀನು ಭೂ ಸ್ವಾಧೀನಕ್ಕೆ ಒಳಪಟ್ಟಿದ್ದು, 1,657.13 ಎಕರೆಗೆ ಪರಿಹಾರ ನೀಡಲಾಗಿದೆ. ಇನ್ನೂ 754 ಎಕರೆ 25 ಸೆಂಟ್ಸ್ ಜಮೀನಿಗೆ ಭೂ ಪರಿಹಾರ ನೀಡಬೇಕಿದೆ. ಎಡ ದಂಡೆಯ ಮುಂಡರಗಿ ತಾಲ್ಲೂಕಿನಲ್ಲಿ 3,629 ಎಕರೆ 21 ಗುಂಟೆ ಜಮೀನು ಭೂ ಸ್ವಾಧೀನಕ್ಕೆ ಒಳಪಟ್ಟಿದ್ದು, ಈ ಪೈಕಿ 3,469 ಎಕರೆ 12 ಗುಂಟೆಗೆ ಪರಿಹಾರ ನೀಡಲಾಗಿದೆ. 160 ಎಕರೆ 9 ಗುಂಟೆಗೆ ಪರಿಹಾರ ನೀಡಬೇಕಿದೆ.

ಇಲ್ಲಿನ ಭೂ ಸ್ವಾಧೀನ ಕಚೇರಿಯಲ್ಲಿ ಹಲವು ವರ್ಷಗಳಿಂದ ಕಾಯಂ ಅಧಿಕಾರಿಯೇ ಇಲ್ಲ. ಹೊಸಪೇಟೆ, ಹರಪನಹಳ್ಳಿ, ಗದಗ ಉಪ ವಿಭಾಗದ ಅಧಿಕಾರಿಗಳಿಗೆ ಹೆಚ್ಚುವರಿ ಪ್ರಭಾರ ವಹಿಸಲಾಗಿದೆ. ಕಚೇರಿಗೆ ಒಟ್ಟು 18 ಹುದ್ದೆಗಳು ಮಂಜೂರಾಗಿದ್ದರೆ ಒಬ್ಬ ಪ್ರಥಮದರ್ಜೆ ಸಹಾಯಕ, ಇಬ್ಬರು ದ್ವಿತೀಯ ದರ್ಜೆ ಸಹಾಯಕರು ಸೇರಿದಂತೆ ನಾಲ್ಕು ಸಿಬ್ಬಂದಿ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಶೀರಸ್ತೇದಾರ ಹುದ್ದೆ, ಐದು ಭೂಮಾಪಕರು, ಇಬ್ಬರು ಗುಮಾಸ್ತರು, ಬೆರಳಚ್ಚುಗಾರ, ಕಂಪ್ಯೂಟರ್ ಆಪರೇಟರ್, ವಾಹನ ಚಾಲಕ, ಜವಾನ ಹುದ್ದೆಗಳು ಖಾಲಿ ಇವೆ. ಜವಾನ, ಕಂಪ್ಯೂಟರ್ ಆಪರೇಟರ್, ಚಾಲಕನನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡು ಕಚೇರಿ ನಿರ್ವಹಿಸಲಾಗುತ್ತಿದೆ.

ಕಾಯಂ ಅಧಿಕಾರಿ ಹಾಗೂ ಸಿಬ್ಬಂದಿ ಕೊರತೆಯಿಂದ ಭೂ ಸ್ವಾಧೀನ ಪ್ರಕ್ರಿಯೆಗಳು ಕಾಲಮಿತಿಯೊಳಗೆ ಪೂರ್ಣಗೊಳ್ಳದೇ ಕಡತಗಳು ಪದೇ ಪದೇ ಅಸಿಂಧುಗೊಳ್ಳುತ್ತಿವೆ. ಭೂಮಿ ಕಳೆದುಕೊಂಡ ರೈತರು ಕಚೇರಿಗೆ ಅಲೆದು ರೋಸಿ ಹೋಗಿದ್ದಾರೆ.

ಎಡ, ಬಲ ದಂಡೆಯ ರೈತರು ಭೂ ಪರಿಹಾರಕ್ಕೆ ಒತ್ತಾಯಿಸಿ ಹಲವು ಬಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ‘ಕಣ್ಣು, ಕಿವಿ ಇಲ್ಲದ ಸರ್ಕಾರ ಸಂತ್ರಸ್ತರ ಗೋಳು ಕೇಳುತ್ತಿಲ್ಲ’ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-25-1324318268

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.