ಮಂಗಳವಾರ, ಸೆಪ್ಟೆಂಬರ್ 21, 2021
21 °C

ಹಂಪಿಯಲ್ಲಿ ಸಿಕ್ಕಿಕೊಂಡಿದ್ದ ಜಯಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಸೋಮವಾರ ನಿಧನರಾದ ನಟಿ ಜಯಂತಿ ಹೋದ ವರ್ಷ ಹಂಪಿ ವೀಕ್ಷಣೆಗೆ ಬಂದು, ಕೋವಿಡ್‌ ಲಾಕ್‌ಡೌನ್‌ನಲ್ಲೇ ಸಿಲುಕಿಕೊಂಡಿದ್ದರು.

2020ರ ಏಪ್ರಿಲ್‌ನಲ್ಲಿ ಹಂಪಿ ಬೈ ನೈಟ್‌ ವೀಕ್ಷಣೆಗೆ ನಟಿ ಜಯಂತಿ ಅವರು ಮಗ ಕೃಷ್ಣಕುಮಾರ ಜತೆಗೆ ಬಂದಿದ್ದರು. ಏಕಾಏಕಿ ಕೋವಿಡ್‌ ಲಾಕ್‌ಡೌನ್‌ ಘೋಷಿಸಿದ್ದರಿಂದ ಅವರು ಒಂದು ತಿಂಗಳಿಗೂ ಹೆಚ್ಚು ಸಮಯ ಕಮಲಾಪುರದ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಹೋಟೆಲ್‌ ಮಯೂರ ಭುವನೇಶ್ವರಿಯಲ್ಲಿ ತಂಗಿದ್ದರು.

ಈ ಕುರಿತು ‘ಪ್ರಜಾವಾಣಿ’ ಬೆಳಕು ಚೆಲ್ಲಿತ್ತು. ಬಳಿಕ ಸರ್ಕಾರ ಅವರಿಗೆ ಬೆಂಗಳೂರಿಗೆ ತೆರಳಲು ಅನುವು ಮಾಡಿಕೊಟ್ಟಿತ್ತು.

‘ನಟಿ ಜಯಂತಿ ಅವರು ಒಂದು ತಿಂಗಳು ನಮ್ಮ ಹೋಟೆಲ್‌ನಲ್ಲೇ ಇದ್ದರು. ದೊಡ್ಡ ನಟಿಯಾಗಿದ್ದರೂ ಯಾವುದೇ ಹಮ್ಮು ಬಿಮ್ಮು ಇರಲಿಲ್ಲ. ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದರು. ಅವರು ಕಾಲವಾದ ವಿಷಯ ತಿಳಿದು ಮನಸ್ಸಿಗೆ ನೋವಾಗಿದೆ’ ಎಂದು ಹೋಟೆಲ್‌ ವ್ಯವಸ್ಥಾಪಕ ಅಭಯ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು