ಹೊಸಪೇಟೆ (ವಿಜಯನಗರ): ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿಗೆ ನಿಜವಾಗಿಯೂ ಮಹಿಳಾ ಮೀಸಲಾತಿ ಅಂಗೀಕಾರವಾಗುವುದು ಇಷ್ಟವಿಲ್ಲ. ಅವರಿಗೆ ನಿಜಕ್ಕೂ ಇದರ ಬಗ್ಗೆ ಕಾಳಜಿ ಇದ್ದಿದ್ದರೆ 2023ರಲ್ಲಿ ಸಂಸತ್ತಿನಲ್ಲಿ ಅಂಗೀಕಾರವಾಗಿರುವ ಕಾಯ್ದೆಯನ್ನೇ ಜಾರಿಗೆ ತರಬೇಕಿತ್ತು ಎಂದು ಅಖಿಲ ಭಾರತ ಮಹಿಳಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಎಂ.ಕಮಲಾಕ್ಷಿ ರಾಜಣ್ಣ ಹೇಳಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, 2023ರಲ್ಲಿ ವಿರೋಧ ಪಕ್ಷಗಳೆಲ್ಲವೂ ಒಕ್ಕೊರಲಿನಿಂದ ಆಗ್ರಹಿಸಿದಂತೆ ಹಾಲಿ 543 ಸ್ಥಾನಗಳಲ್ಲೇ ಶೇ 33 ಮೀಸಲಾತಿಯನ್ನು ಸರ್ಕಾರ ನೀಡಲು ಮುಂದಾಗಿದ್ದರೆ ಈ ಬಾರಿ ಎಲ್ಲಾ ವಿರೋಧ ಪಕ್ಷಗಳೂ ಅದಕ್ಕೆ ಒಪ್ಪಿಗೆ ಸೂಚಿಸುತ್ತಿದ್ದವು ಎಂದರು.

2023ರ ನಾರಿಶಕ್ತಿ ವಂದನ ಕಾಯ್ದೆಯನ್ನು ಎಲ್ಲಾ ವಿರೋಧ ಪಕ್ಷಗಳೂ ಒಕ್ಕೊರಲಿನಿಂದ ಸ್ವಾಗತಿಸಿದ್ದವು. ಸಂಸತ್ತಿನ ಎರಡೂ ಸದನಗಳ ಒಪ್ಪಿಗೆ ದೊರೆತು ರಾಷ್ಟ್ರಪತಿ ಅವರಿಂದಲೂ ಅಂಕಿತಗೊಂಡಿದೆ. ಆದರೆ 2026ರ ಜನಗಣತಿ ಆಧರಿಸಿ ಕ್ಷೇತ್ರ ಮರುವಿಂಗಡಣೆ ಆದ ನಂತರ ಮೀಸಲಾತಿಯನ್ನು ಜಾರಿಮಾಡಲಾಗುವುದು ಎಂದು ಹೇಳಿ 2034ರ ತನಕ ಮಹಿಳಾ ಮೀಸಲಾತಿ ಜಾರಿಯಾಗದಂತೆ ಷರತ್ತುಗಳನ್ನು ವಿಧಿಸಲಾಗಿದೆ. ಸಂಸತ್ತಿನಲ್ಲಿ ಒಪ್ಪಿಗೆ ಸಿಗುವುದಿಲ್ಲ ಎಂದು ಗೊತ್ತಿದ್ದರೂ ವಿಶೇಷ ಅಧಿವೇಶನ ಕರೆದುದಕ್ಕೆ ಬೇರೆಯೇ ಕಾರಣ ಇದೆ. ಕಾಂಗ್ರೆಸ್, ಇತರ ವಿರೋಧ ಪಕ್ಷಗಳು ಮಹಿಳಾ ಮೀಸಲಾತಿಗೆ ವಿರೋಧ ಸೂಚಿಸಿವೆ ಎಂಬುದನ್ನು ರಾಜ್ಯ ವಿದಾನಸಭಾ ಚುನಾವಣೆ ಸಂದರ್ಭದಲ್ಲಿ ಜನರಿಗೆ ತಿಳಿಸಿ, ಅವರ ಮನಸ್ಸು ಕೆಡಿಸುವ ಹುನ್ನಾರ ಇದರ ಹಿಂದೆ ಅಡಗಿತ್ತು ಎಂದು ಅವರು ಹೇಳಿದರು.

ಬಿಜೆಪಿ ತಂತ್ರ ಫಲಿಸದು: ಬಿಜೆಪಿಗೆ ನಿಜವಾಗಿಯೂ ಮಹಿಳೆಯರ ಬಗ್ಗೆ ಕಾಳಜಿ ಇದ್ದರೆ ಕಾನೂನು ರಚನೆಯ ತನಕ ಕಾಯದೆ ಮಹಿಳೆಯರಿಗೆ ಶೇ 33ರಷ್ಟು ಟಿಕೆಟ್ ನೀಡಬಹುದಿತ್ತು. ಮಸೂದೆ ಸೋತ ನಂತರ ಪ್ರಧಾನಿ ಮೋದಿ ಅವರು ಸರ್ಕಾರಿ ಯಂತ್ರ ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳನ್ನು ಮಹಿಳಾ ವಿರೋಧಿ ಎಂದು ಬಿಂಬಿಸಿದರು. ಮಹಿಳಾ ವಿರೋಧಿ ಪಟ್ಟವನ್ನು ವಿರೋಧ ಪಕ್ಷಗಳಿಗೆ ಕಟ್ಟುವ ತಂತ್ರ ಫಲಿಸದು. ರಾಜೀವ್ ಗಾಂಧಿ ಅವರ ಪ್ರಯತ್ನದಿಂದಲೇ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸೀಟು ಲಭಿಸಿದ್ದನ್ನು ದೇಶದ ಜನತೆ ಮರೆತಿಲ್ಲ ಎಂದು ಕಮಲಾಕ್ಷಿ ರಾಜಣ್ಣ ಹೇಳಿದರು.

ಪಕ್ಷದ ಮುಖಂಡರಾದ ವೀಣಾ ಮಹಾಂತೇಶ್, ಕವಿತಾ ಈಶ್ವರ ಸಿಂಗ್, ಮುನ್ನಿ ಕಾಸಿಂ, ಕನಕಮ್ಮ, ಮಮ್ತಾಜ್, ಲಕ್ಷ್ಮಿ, ಇಂದುಮತಿ, ರಾಮಕೃಷ್ಣ ನಿಂಬಗಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.