ಶುಕ್ರವಾರ, ಮೇ 27, 2022
21 °C

ವಿಜಯನಗರ: ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಕರಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೋನಿಗೆ ಬಿದ್ದ ಕರಡಿ

ಕಾನಹೊಸಹಳ್ಳಿ (ವಿಜಯನಗರ ಜಿಲ್ಲೆ): ಸಮೀಪದ ಕಡಾಕೋಳ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಮಂಗಳವಾರ ಕರಡಿ ಬಿದ್ದಿದೆ.

ಚಿಕ್ಕಜೋಗಿಹಳ್ಳಿ, ಕಡಾಕೋಳ, ಮಡ್ಲಾನಾಯಕನಹಳ್ಳಿ, ಭೀಮಸಮುದ್ರ, ಕುರಿಹಟ್ಟಿ ಭಾಗಗಳಲ್ಲಿ ಕರಡಿ ಕಾಣಿಸಿಕೊಂಡಿತ್ತು.

ಚಿಕ್ಕಜೋಗಿಹಳ್ಳಿಯ ಪೆಟ್ರೋಲ್ ಬಂಕ್, ಲಕ್ಮಣ್ ನಾಯಕ್ ಎಂಬುವರ ತೋಟದ ಬಳಿ ರಾತ್ರಿ ವೇಳೆ ಕರಡಿ ಓಡಾಡಿರುವ ವಿಡಿಯೊ ವೈರಲ್ ಆಗಿದ್ದವು. ಕೆಲವೆಡೆ ಹಗಲಲ್ಲಿಯೇ ಕರಡಿ ಕಾಣಿಸಿಕೊಂಡಿದ್ದರಿಂದ ರೈತರು ಆತಂಕಕ್ಕೆ ಒಳಗಾಗಿದ್ದರು.

ಬೋನಿಗೆ ಬಿದ್ದಿರುವ ಕರಡಿಯನ್ನು ಗುಡೇಕೋಟೆ ಕರಡಿಧಾಮಕ್ಕೆ ಸಾಗಿಸುವುದಾಗಿ  ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು