ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗರಿಬೊಮ್ಮನಹಳ್ಳಿ| ಕಾರಹುಣ್ಣಿಮೆ: ಎತ್ತುಗಳ ಓಟದ ಸ್ಪರ್ಧೆ

Published 4 ಜೂನ್ 2023, 16:16 IST
Last Updated 4 ಜೂನ್ 2023, 16:16 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ವಿವಿಧ ಗ್ರಾಮಗಳು ಮತ್ತು ಪಟ್ಟಣದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಭಾನುವಾರ ರೈತರ ಮನೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು.

ಎತ್ತುಗಳಿಗೆ ವಿವಿಧ ಬಣ್ಣಗಳಿಂದ ಸಿಂಗರಿಸಲಾಗಿತ್ತು. ಸಂಜೆ ಪಟ್ಟಣದ ಕೂಡ್ಲಿಗಿ ರಸ್ತೆಯಲ್ಲಿ ಅರಳಿಹಳ್ಳಿ ಮುಖಂಡರು ಎತ್ತುಗಳಿಗೆ ಕರಿ ಬಿಡುವ (ಓಟದ ಸ್ಪರ್ಧೆ) ಏರ್ಪಡಿಸಿದ್ದರು.

ಹರಪನಹಳ್ಳಿ ಖಹೀಂ ಸಾಹೇಬ್ ಅವರ ಎತ್ತು ಪ್ರಥಮ ಸ್ಥಾನಗಳಿಸಿತು. ಎತ್ತಿನ ಮಾಲೀಕರ ಮನೆಯಲ್ಲಿ ಸಂಭ್ರಮ ಆಚರಿಸಲಾಯಿತು. ಸ್ಪರ್ಧೆಯಲ್ಲಿ 10ಕ್ಕೂ ಹೆಚ್ಚು ಎತ್ತುಗಳನ್ನು ಬಿಡಲಾಗಿತ್ತು.

ಮುಖಂಡರಾದ ಎಂ.ಬುಡೇನ್ ಸಾಹೇಬ್, ಕೊಳ್ಳಿ ಜಂಬಣ್ಣ, ಪಿ.ನಾಗರಾಜ, ಬಿ.ದಾದಾ ಸಾಹೇಬ್, ತಳವಾರ ಬಸವರಾಜ, ಬಿ.ಮೌಲಾಸಾಹೇಬ್, ಇಮಾಮ್ ಸಾಹೇಬ್, ಬಾಬು, ರಾಜಾಸಾಹೇಬ್, ದಲಾಲಿ ಬುಡೇನ್ ಸಾಹೇಬ್, ಜಮಾಲ್ ಸಾಹೇಬ್, ಮೋರಿಗೇರಿ ನಾಗಪ್ಪ, ಚಿಲಗೋಡು ಕರಿಯಪ್ಪ, ಫೋಟೊ ನಾಗರಾಜ, ಮಂಜುನಾಥ, ಮೂಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT