ಕರ್ನಾಟಕ ಗ್ರಾಮೀಣ ಬ್ಯಾಂಕ್ 19ನೇ ಪ್ರಾದೇಶಿಕ ಕಚೇರಿ ಆರಂಭ

ಹೊಸಪೇಟೆ (ವಿಜಯನಗರ): ಕರ್ನಾಟಕ ಗ್ರಾಮೀಣ ಬ್ಯಾಂಕಿನ 19ನೇ ಪ್ರಾದೇಶಿಕ ಕಚೇರಿ ಸೋಮವಾರ ನಗರದಲ್ಲಿ ಆರಂಭಗೊಂಡಿತು.
ನಗರದ ಚಿತ್ತವಾಡ್ಗಿ ರಸ್ತೆಯಲ್ಲಿ ಆರಂಭಿಸಿರುವ ನೂತನ ಕಚೇರಿಯನ್ನು ಬ್ಯಾಂಕಿನ ಅಧ್ಯಕ್ಷ ಶ್ರೀನಾಥ ಎಚ್. ಜೋಶಿ, ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಉದ್ಘಾಟಿಸಿದರು.
‘ನೂತನ ವಿಜಯನಗರ ಜಿಲ್ಲೆಯ ಎಲ್ಲ ಆರು ತಾಲ್ಲೂಕುಗಳ ಜನರಿಗೆ, ಗ್ರಾಹಕರಿಗೆ ತ್ವರಿತ, ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಹೊಸ ಕಚೇರಿ ಆರಂಭಿಸಲಾಗಿದೆ. ಈ ಹಿಂದಿನಂತೆ ಗ್ರಾಹಕರು ಬಳ್ಳಾರಿಗೆ ಹೋಗಬೇಕಿಲ್ಲ’ ಎಂದು ಶ್ರೀನಾಥ ಎಚ್. ಜೋಶಿ ಹೇಳಿದರು.
ಸಿದ್ದರಾಮೇಶ್ವರ ಮಾತನಾಡಿ, ‘ಗ್ರಾಮೀಣ ಬ್ಯಾಂಕುಗಳು ಗ್ರಾಮೀಣ ಪ್ರದೇಶವನ್ನು ಕೇಂದ್ರೀಕರಿಸಿ ಸೇವೆ ಸಲ್ಲಿಸುತ್ತಿರುವುದು ಉತ್ತಮ ಸಂಗತಿ. ಇದೇ ರೀತಿ ಈ ಕೆಲಸ ಮುಂದುವರೆಯಬೇಕು’ ಎಂದು ತಿಳಿಸಿದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎ.ಎನ್. ಪ್ರಸಾದ, ಪ್ರಾದೇಶಿಕ ಕಛೇರಿಯ ಸಹಾಯಕ ಮಹಾ ಪ್ರಬಂಧಕ ಸಿದ್ದೇಶ್ವರ, ಖಜಾನೆ ಇಲಾಖೆಯ ಸಹಾಯಕ ನಿರ್ದೇಶಕ ಕೆ. ವೆಂಕಟೇಶ ಮೂರ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಜೀರೆ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.