ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ ನಗರಸಭೆ: ಖಾತೆ ತೆರೆದ ಆಮ್‌ ಆದ್ಮಿ, ಖಾರದಪುಡಿ ಮಹೇಶ್‌ಗೂ ಗೆಲುವು

Last Updated 30 ಡಿಸೆಂಬರ್ 2021, 11:23 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರಸಭೆಯ 22ನೇ ವಾರ್ಡಿನಲ್ಲಿ ಜಯ ಗಳಿಸುವ ಮೂಲಕ ‘ಆಮ್‌ ಆದ್ಮಿ’ ಪಕ್ಷ ಖಾತೆ ತೆರೆದಿದೆ. ಪಕ್ಷದ ಅಭ್ಯರ್ಥಿ ಶೇಕ್ಷಾವಲಿ ಅವರು ಎಎಪಿಯಿಂದ ಕಣಕ್ಕಿಳಿದಿದ್ದರು. ಮೊದಲ ಚುನಾವಣೆಯಲ್ಲೇ ಮತದಾರರು ಎಎಪಿ ಕೈ ಹಿಡಿದಿದ್ದಾರೆ.

ಖಾರದಪುಡಿ ಮಹೇಶ ಗೆಲುವು:ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿದ್ದ ಖಾರದಪುಡಿ ಮಹೇಶ ನಗರಸಭೆ ಚುನಾವಣೆಯಲ್ಲಿ ಜಯಶಾಲಿಯಾಗಿದ್ದಾರೆ. ಕಾಂಗ್ರೆಸ್‌ನಿಂದ 20ನೇ ವಾರ್ಡ್‌ನಿಂದ ಮಹೇಶ ಸ್ಪರ್ಧಿಸಿದ್ದರು. ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿದ್ದ ಕಾಂಗ್ರೆಸ್‌ ಪಕ್ಷವು, ಮಹೇಶ ಅವರಿಗೆ ಟಿಕೆಟ್‌ ನೀಡಿದ್ದಕ್ಕೆ ತೀವ್ರ ಟೀಕೆ ವ್ಯಕ್ತವಾಗಿತ್ತು.

1 ಮತ ಅಂತರದಲ್ಲಿ ಗೆಲುವು:ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿಯ ಒಂದನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಎಲ್.ವಸಂತ 1 ಮತದ ಅಂತರದಿಂದ ಜಯಶಾಲಿಯಾಗಿದ್ದಾರೆ. ವಸಂತ 166 ಮತ ಪಡೆದರೆ, ಅವರ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಎಂ. ವಿರೂಪಾಕ್ಷ 165 ಮತ ಗಳಿಸಿದ್ದಾರೆ. ಎರಡು ಬಾರಿ ಮರು ಮತ ಎಣಿಕೆ ನಡೆಸಲಾಯಿತು.

5 ಮತಗಳಿಂದ ಜಯ:ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪುರಸಭೆಯ 1ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಸರಸ್ವತಿ 5 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮಮತಾ ಅವರನ್ನು ಸೋಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT