ಹೊಸಪೇಟೆ (ವಿಜಯನಗರ): ಜಿಲ್ಲೆಯ ಸರ್ಕಾರಿ ದ್ವಿಭಾಷಾ ಶಾಲೆಗಳ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ತರಗತಿಗಳ ಅತಿಥಿ ಶಿಕ್ಷಕರಿಗೆ ಸಂಬಳ ರೂಪದಲ್ಲಿ ನೀಡಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) ₹2.26 ಕೋಟಿ ಬಿಡುಗಡೆ ಮಾಡಿದೆ ಎಂದು ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ ತಿಳಿಸಿದ್ದಾರೆ.

‘ಅತಿಥಿ ಶಿಕ್ಷಕರಿಗೆ ಎರಡರಿಂದ ಮೂರು ದಿನಗಳ ಒಳಗೆ ಸಂಬಳ ಅವರ ಖಾತೆಗೆ ಜಮಾ ಆಗಲಿದೆ. ಬಾಕಿ ಉಳಿಯುವ ಸಂಬಳ ಸಹ ಶೀಘ್ರ ಬಿಡುಗಡೆಯಾಗಲಿದೆ’ ಎಂದು ಅವರು ಶುಕ್ರವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ದ್ವಿಭಾಷಾ ಶಿಕ್ಷಕರಿಗೆ ಒಂಭತ್ತು ತಿಂಗಳಿಂದ ಸಂಬಳ ಇಲ್ಲ’ ಎಂಬ ಶೀರ್ಷಿಕೆಯಲ್ಲಿ ‘ಪ್ರಜಾವಾಣಿ’ಯಲ್ಲಿ ಮಾರ್ಚ್ 11ರಂದು ವಿಶೇಷ ವರದಿ ಪ್ರಕಟವಾಗಿತ್ತು. ಕೆಲವು ಶಾಸಕರು ವಿಳಂಬ ಮಾಡಿದ್ದಕ್ಕೆ ಕೆಕೆಆರ್ಡಿಬಿಯಿಂದ ಅನುದಾನ ಬಂದಿಲ್ಲ, ಎಲ್ಲ ಪ್ರಕ್ರಿಯೆಗಳು ಮುಗಿದಿದ್ದು, ಶೀಘ್ರ ಬಿಡುಗಡೆಯಾಗಲಿದೆ ಎಂದು ಡಿಡಿಪಿಐ ಅವರು ನೀಡಿದ ಹೇಳಿಕೆಯೂ ಜತೆಗೆ ಇತ್ತು. ವರದಿ ಪ್ರಕಟವಾದ ಬಳಿಕ ಸಂಬಳ ಅನುದಾನ ವೇಗವಾಗಿ ಬಿಡುಗಡೆ ಆದಂತಾಗಿದೆ. ಹಲವು ಅತಿಥಿ ಶಿಕ್ಷಕರು ಹಾಗೂ ಎಸ್ಡಿಎಂಸಿ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.