ಹೊಸಪೇಟೆ (ವಿಜಯನಗರ): ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕೆಕೆಆರ್ಟಿಸಿ) ವಿಜಯನಗರ ವಿಭಾಗೀಯ ಮಟ್ಟದಲ್ಲಿ ಶೀಘ್ರದಲ್ಲೇ ಟಿಕೆಟ್ಗೆ ನಗದು ಪಾವತಿ ಬದಲಿಗೆ ಯುಪಿಐ ಮೂಲಕ ಆನ್ಲೈನ್ ಪಾವತಿ ವ್ಯವಸ್ಥೆ ಜಾರಿಗೆ ಬರಲಿದ್ದು, ಅದರ ಪ್ರಾಯೋಗಿಕ ಪರೀಕ್ಷೆ ಆರಂಭವಾಗಿದೆ.

ರಾಜ್ಯದ ಇತರ ಎರಡೂ ನಿಗಮಗಳಲ್ಲಿ ಈ ವ್ಯವಸ್ಥೆ ಈಗಾಗಲೇ ಜಾರಿಗೆ ಬಂದಿದ್ದು, ಕೆಕೆಆರ್ಟಿಸಿಗೆ ಇದು ದೊಡ್ಡ ಕೊರತೆಯಾಗಿತ್ತು. ಸಾಕಷ್ಟು ಬಾರಿ ನಿರ್ವಾಹಕರು ಪ್ರಯಾಣಿಕರಿಂದ ಈ ವಿಷಯದಲ್ಲಿ ಚರ್ಚೆ, ಸಿಟ್ಟು ಎದುರಿಸಬೇಕಾಗಿ ಬಂದಿತ್ತು. ಅದಕ್ಕೆ ಶಾಶ್ವತವಾಗಿ ವಿರಾಮ ನೀಡುವ ಕಾಲ ಸಮೀಪಿಸಿದೆ.

‘ಜಿಲ್ಲೆಯಲ್ಲಿ ಐದು ಡಿಪೋಗಳಿದ್ದು, ಒಂದೊಂದು ಡಿಪೋದಲ್ಲಿ ತಲಾ ಐದು ಬಸ್ಗಳಲ್ಲಿ (ಒಟ್ಟು 25) ವಾರದಿಂಚೀಚೆಗೆ ಯುಪಿಐ ಮೂಲಕ ಟಿಕೆಟ್ ನೀಡುವ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಎಲ್ಲಿಂದಲೂ ಸಮಸ್ಯೆ ಕೇಳಿಬಂದಿಲ್ಲ. ಈ ಯಶಸ್ಸಿನಿಂದಾಗಿ ತೃಪ್ತಿಯಾಗಿದ್ದು, ಇನ್ನೊಂದು ವಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವ ಯೋಜನೆ ಇದೆ’ ಎಂದು ಕೆಕೆಆರ್ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ ಹುದ್ದಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬಸ್ಗಳಲ್ಲಿ ಯುಪಿಐ ಸೇವೆ ಬೇಕು ಎಂಬುದು ಪ್ರಯಾಣಿಕರ ಬಹುಕಾಲದ ಬೇಡಿಕೆಯಾಗಿತ್ತು, ಅದು ಶೀಘ್ರ ಈಡೇರುತ್ತಿದೆ, ನಿರ್ವಾಹಕರು ಸಹ ಇನ್ನು ಮುಂದೆ ಚಿಲ್ಲರೆ ಸಮಸ್ಯೆಯಿಂದ ಮುಕ್ತರಾಗಬಹುದು ಎಂದು ಅವರು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-25-1531452248

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.