ಹೊಸಪೇಟೆ (ವಿಯನಗರ): ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕೆಕೆಆರ್ಟಿಸಿ) ವಿಜಯನಗರ ವಿಭಾಗೀಯ ಮಟ್ಟದಲ್ಲಿ ಪೂರ್ಣ ಪ್ರಮಾಣದಲ್ಲಿ ಯುಪಿಐ ಮೂಲಕ ಹಣ ಪಡೆದು ಟಿಕೆಟ್ ನೀಡುವಿಕೆ ಆರಂಭವಾಗಿದ್ದು, ಸದ್ಯ ಶೇ 10ರಷ್ಟು ಪ್ರಯಾಣಿಕರು ಇದನ್ನು ನೆಚ್ಚಿಕೊಂಡಿರುವುದು ಗೊತ್ತಾಗಿದೆ.

ಹೊಸಪೇಟೆ ಮತ್ತು ಹರಪನಹಳ್ಳಿ ಡಿಪೊ ವ್ಯಾಪ್ತಿಯಲ್ಲಿ ಶೇ 11ರಿಂದ 12ರಷ್ಟು ಮಂದಿ ಆನ್ಲೈನ್ ಮೂಲಕ ಟಿಕೆಟ್ ಖರೀದಿ ನಡೆಸುತ್ತಿದ್ದರೆ, ಉಳಿದ ಡಿಪೊ ವ್ಯಾಪ್ತಿಯಲ್ಲಿ ಶೇ 7ರಿಂದ 8ರಷ್ಟು ಮಂದಿ ಇದರ ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಸರಾಸರಿ ಶೇ 10ರಷ್ಟು ಪ್ರಯಾಣಿಕರು ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್ ಪಡೆಯುತ್ತಿದ್ದಾರೆ ಎಂದು ಕೆಕೆಆರ್ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ ಹುದ್ದಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಎಸ್ಆರ್ಟಿಸಿಯಲ್ಲಿ ಇರುವಂತೆ ಕೆಕೆಆರ್ಟಿಸಿಯಲ್ಲಿ ಸುಧಾರಿತ ‘ಡೈನಾಮಿಕ್’ ಟಿಕೆಟ್ ನೀಡಿಕೆ ವ್ಯವಸ್ಥೆ ಅಳವಡಿಸಲಾಗಿದೆ. ಶಾಪಿಂಗ್ ಮಾಲ್ಗಳಲ್ಲಿ ಇರುವಂತೆ ನಿರ್ದಿಷ್ಟ ಟಿಕೆಟ್ ಮೊತ್ತ ನಮೂದಾಗಿಯೇ ಬರುವ ಕಾರಣ ಹಣ ಹೆಚ್ಚು ಸಂದಾಯವಾಗುವ ಪ್ರಮೇಯ ಇಲ್ಲ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಈಗಲೂ ‘ಸ್ಟಾಟಿಕ್’ ಟಿಕೆಟ್ ನೀಡಿಕೆ ವ್ಯವಸ್ಥೆಯೇ ಇದೆ, ಹೀಗಾಗಿ ನಮ್ಮ ಜಿಲ್ಲೆಯಲ್ಲಿ ಸುಧಾರಿತ ಯುಪಿಐ ಟಿಕೆಟ್ ನೀಡಿಕೆಯಿಂದಲೇ ಹೊಸ ವ್ಯವಸ್ಥೆ ಆರಂಭಗೊಂಡಂತಾಗಿದೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಪ್ರತಿದಿನ 440ರಷ್ಟು ವಿದ್ಯುನ್ಮಾನ ಟಿಕೆಟ್ ನೀಡಿಕೆ (ಇಟಿಎಂ) ಯಂತ್ರಗಳ ಬಳಕೆ ಆಗುತ್ತಿದೆ, ಈ ಎಲ್ಲಾ ಯಂತ್ರಗಳಲ್ಲೂ ಇದೀಗ ಸ್ಕ್ಯಾನಿಂಗ್ ಮಾಡಿ ಪ್ರಯಾಣಿಕರು ಜೇಬಲ್ಲಿ ದುಡ್ಡಿಲ್ಲದೆ ಇದ್ದರೂ ತಮ್ಮ ಮೊಬೈಲ್ ಮೂಲಕ ಬ್ಯಾಂಕ್ನಿಂದ ನೇರವಾಗಿ ಪಾವತಿಸಿ ಪ್ರಯಾಣಿಸಬಹುದಾಗಿದೆ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-25-453431239

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.