ಕೂಡ್ಲಿಗಿ: ತಾಲ್ಲೂಕಿನ ಹಿರೇಕುಂಬಳಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರು ₹19 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿದರು.

₹12.50 ಲಕ್ಷ ವೆಚ್ಚದಲ್ಲಿ ಸಕಲಾಪುರಹಟ್ಟಿಯ ಎಸ್.ಸಿ ಕಲೋನಿಯಲ್ಲಿ ಸಿಸಿ ರಸ್ತೆ, ₹4.90 ಕೋಟಿ ವೆಚ್ಚದಲ್ಲಿ ಹಿರೇಕುಂಬಳಗುಂಟೆ ಮತ್ತು ಹುಲಿಕೆರೆ ಮಧ್ಯದಲ್ಲಿ ಜಿನುಗು ಕೆರೆ ನಿರ್ಮಾಣ, ₹1 ಕೋಟಿ ವೆಚ್ಚದಲ್ಲಿ ಹುಲಿಕೆರೆ ಗ್ರಾಮದ ಪರಿಶಿಷ್ಟ ಪಂಗಡ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣ, ₹4.90 ಕೋಟಿ ವೆಚ್ಚದಲ್ಲಿ ನಿಂಬಳಗೆರೆಯಿಂದ ರಂಗನಾಥನಹಳ್ಳಿ ಮುಖ್ಯ ರಸ್ತೆ ಅಭಿವೃದ್ಧಿ, ₹10 ಲಕ್ಷ ವೆಚ್ಚದಲ್ಲಿ ರಂಗನಾಥನಹಳ್ಳಿಯಲ್ಲಿ ಸಿಸಿ ರಸ್ತೆ ನಿರ್ಮಾಣ, ₹1 ಕೋಟಿ ವೆಚ್ಚದಲ್ಲಿ ಬೆಳಕಟ್ಟೆಯಿಂದ ಬಲಯು ತುಂಬರಗುದ್ದಿಯವರಗೆ ರಸ್ತೆ ಅಭಿವೃದ್ಧಿ, ₹4.90 ಕೋಟಿ ವೆಚ್ಚದಲ್ಲಿ ನಿಂಬಳಗೆರೆಯಿಂದ ಬಯಲುತುಂಬರಗುದ್ದಿಯವರಗೆ ಮುಖ್ಯ ರಸ್ತೆ ಅಭಿವೃದ್ಧಿ, ಟಿ. ಸೂರವ್ವನಹಳ್ಳಿಯಲ್ಲಿ ₹2.50 ಲಕ್ಷ ವೆಚ್ಚದಲ್ಲಿ ಅಂಗನೇವ ದೇವಸ್ಥಾನ ಅಭಿವೃದ್ಧಿ, ₹1.50 ಕೋಟಿ ವೆಚ್ಚದಲ್ಲಿ ಹೊಸಹಳ್ಳಿಯಿಂದ ಹಿರೇಕುಂಬಳಗುಂಟೆಯವರಗೆ ಕಿರು ಸೇತುವೆಗಳ ನಿರ್ಮಾಣ, ₹20 ಲಕ್ಷ ವೆಚ್ಚದಲ್ಲಿ ಹಿರೇಕೂಂಬಳಗುಂಟೆಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ ಅವರು, ₹20 ಲಕ್ಷ ವೆಚ್ಚದಲ್ಲಿ ಸಕಲಾಪುರಹಟ್ಟಿಯಲ್ಲಿ ನಿರ್ಮಾಣ ಮಾಡಿರುವ ಅಂಗನವಾಡಿ ಕಟ್ಟಡ ಉದ್ಘಾಟನೆ, ಹುಲಿಕೆರೆಯಿಂದ ಚಿಕ್ಕಕುಂಬಳಗುಂಟೆವರಗೆ ₹8.90 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ರಸ್ತೆ ಹಾಗೂ ಹುಲಿಕೆರೆ ಬಳಿ ನಿರ್ಮಾಣ ಮಾಡಿರುವ ಚೆಕ್ ಡ್ಯಾಂ ಲೋಕಾರ್ಪಣೆ ಮಾಡಿ, ಹಿರೇಕುಂಬಳಗುಂಟೆ ಗೊಲ್ಲರಹಟ್ಟಿಯಲ್ಲಿ ₹18 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶಾಲಾ ಕೊಠಡಿಯನ್ನು ಉದ್ಘಾಟನೆ ಮಾಡಿದರು. ಇದಕ್ಕು ಮೊದಲು ಅವರು ಬೆಳಿಗ್ಗೆ ಸಕಲಾಪುರಹಟ್ಟಿಯಲ್ಲಿ ತಾಲ್ಲೂಕು ಪಂಚಾಯಿತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಚತಾ ಅಂದೋಲನದಲ್ಲಿ ಭಾಗಿಯಾಗಿ ಗ್ರಾಮದಲ್ಲಿ ಸ್ವಚ್ಛ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-25-1558815810

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.