ಕೂಡ್ಲಿಗಿ: ಲೋಕೋಪಯೋಗಿ ಇಲಾಖೆ ಜಾರಿಗೊಳಿಸಿದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿವೇಶನ ರಹಿತರಿಗೆ ನಿವೇಶನ ಹಂಚುವ ‘ಬುದ್ಧ ಬಸವ ಅಂಬೇಡ್ಕರ್’ ವಸತಿ ಯೋಜನೆಗೆ ತಾಲ್ಲೂಕಿನ ನರಸಿಂಹಗಿರಿ ಹಾಗೂ ಕಾಟ್ರಹಳ್ಳಿ ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಶಾಸಕ ಡಾ.ಶ್ರೀನಿವಾಸ್ ಎನ್.ಟಿ. ಅವರು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ ಜಾರಕಿಹೊಳೆ ಅವರೊಂದಿಗೆ ಸುದೀರ್ಘ ಚರ್ಚೆ ಫಲವಾಗಿ ತಾಲ್ಲೂಕಿನ ಬೆಳಗಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಸಿಂಹಗಿರಿ ಗ್ರಾಮದ ಸ.ನಂ. 231ರಲ್ಲಿ 2.50 ಎಕರೆ ಹಾಗೂ ಕಾಟ್ರಹಳ್ಳಿ ಗ್ರಾಮದ ಸ.ನಂ 207ರಲ್ಲಿ 1.25 ಎಕರೆ ಜಾಗವನ್ನು ಗುರುತಿಸಲಾಗಿದೆ.

ಲೋಕೋಪಯೋಗಿ ಇಲಾಖೆಯಿಂದ ಹೊರಡಿಸಿರುವ ಅದೇಶ ಪ್ರತಿಯನ್ನು ಮಂಗಳವಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳೆ ಅವರು ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರಿಗೆ ಮಂಗಳವಾರ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.