ಕೊಟ್ಟೂರು: ಮರುಳಸಿದ್ಧೇಶ್ವರ ಸ್ವಾಮಿ ರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಕೂಡ್ಲಿಗಿ ಕ್ಷೇತ್ರದ ಶಾಸಕ ಎನ್.ಟಿ.ಶ್ರೀನಿವಾಸ್ ಸೂಚಿಸಿದರು.

ತಾಲ್ಲೂಕಿನ ಉಜ್ಜಯಿನಿ ಪೀಠದಲ್ಲಿ ಏ.21 ರಂದು ರಥೋತ್ಸವ ಹಾಗೂ 22 ರಂದು ಶಿಖರತೈಲಾಭೀಷೇಕ ಜರುಗುವುದರಿಂದ ಬುಧವಾರ ಪೀಠಕ್ಕೆ ಭೇಟಿ ನೀಡಿ ಮರುಳಸಿದ್ಧೇಶ್ವರ ಸ್ವಾಮಿಯ ದರ್ಶನ ಹಾಗೂ ಪೀಠಾಧೀಶರ ಆಶೀರ್ವಾದ ಪಡೆದು ನಂತರ ಗ್ರಾಮದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ರಥೋತ್ಸವದ ಪ್ರಯುಕ್ತ ರಸ್ತೆ ಹಾಗೂ ಚರಂಡಿಗಳ ಸ್ವಚ್ಛತೆ ಹಾಗೂ ಬೀದಿ ದೀಪಗಳು ಹಾಗೂ ನೀರಿನ ವ್ಯವಸ್ಥೆ ಮುಂತಾದ ಮೂಲ ಸೌಕರ್ಯಗಳನ್ನು ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಆಡಳಿತಕ್ಕೆ ಸೂಚಿಸಿದರು. ವಾಹನಗಳ ನಿಲುಗಡೆ ಸೂಕ್ತ ಸ್ಥಳವನ್ನು ನಿಗದಿಪಡಿಸುವುದಲ್ಲದೇ ಬಸ್ಗಳ ವ್ಯವಸ್ಥೆ ಹಾಗೂ ಭಕ್ತರಿಗೆ ಸೂಕ್ತ ರಕ್ಷಣೆ ಕಲ್ಪಿಸಲು ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಕೆ. ಸಿದ್ದೇಶ ಗೌಡ, ತೂಲಹಳ್ಳಿ ಶಾಂತನಗೌಡ, ಬಂಗಾರಿ ವೀರೇಶ, ಮಂಜುನಾಥ ಗೌಡ, ಶಿವಣ್ಣ, ಸಿದ್ದೇಶ ಪಾಟೇಲ್, ಬಿಂಗಿ ವೆಂಕಟೇಶ, ರಿಜ್ವಾನ್ ಸಾಬ್, ಸಿದ್ಲಿಂಗ ಆಚಾರ್ಯ, ಬಿ.ಡಿ. ಗುಡ್ಡ ಓಬಣ್ಣ, ಚಂದ್ರಪ್ಪ, ಚೌಡಪ್ಪ, ಗಾಣಗಟ್ಟೆ ಮಹಾಂತೇಶ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-25-17884380

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.