ಕೊಟ್ಟೂರು: ‘ಹಣ, ಆಸ್ತಿ ಇದ್ದವರು ಶ್ರೀಮಂತರಲ್ಲ; ಹೃದಯ ಶ್ರೀಮಂತಿಕೆ ಇದ್ದವರೇ ನಿಜವಾದ ಶ್ರೀಮಂತರು’ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹರಾಳು ಗ್ರಾಮದಲ್ಲಿ ಶುಕ್ರವಾರ ನಡೆದ ಕರಿಯಮ್ಮದೇವಿ ದೇವಸ್ಥಾನದ ಕಳಸಾರೋಹಣ ಹಾಗೂ ಕರಿಗಲ್ಲು ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಚಿಕ್ಕವರಿದ್ದಾಗ ತಾಯಿಯ ಜೋಗಳ, ದೊಡ್ಡವರಾದಾಗ ತಂದೆಯ ಬೈಗಳು ಕೂಡಿದಾಗ ಮಾತ್ರ ಪರಿಪೂರ್ಣರಾಗುತ್ತೇವೆ. ಇದರಿಂದ ಬದುಕು ಉಜ್ವಲವಾಗುತ್ತದೆ. ಗುರು–ಹಿರಿಯರು ಹೇಳುವ ಮಾತು ಕೇಳಿದಾಗ ಬದುಕು ಅರ್ಥಪೂರ್ಣವಾಗುತ್ತದೆ’ ಎಂದರು.

‘ಕೆಲವರು ಕುಟುಂಬದತ್ತ ಮಾತ್ರ ಗಮನಹರಿಸುತ್ತಾರೆ. ಇನ್ನೂ ಕೆಲವರು ಸಮಾಜವನ್ನೇ ತಮ್ಮ ಕುಟುಂಬವೆಂದು ಭಾವಿಸಿ, ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಾರೆ. ಇಂತಹವರು ಉಸಿರು ನಿಂತ ಮೇಲೂ ಸಮಾಜದಲ್ಲಿ ತಮ್ಮ ಹೆಸರು ಉಳಿಸಿಹೋಗುತ್ತಾರೆ. ಇವರದು ಸಾರ್ಥಕ ಜೀವನವಾಗುತ್ತದೆ’ ಎಂದು ಹೇಳಿದರು.

ಮಾಜಿ ಶಾಸಕ ಎಲ್.ಬಿ.ಪಿ. ಭೀಮಾನಾಯ್ಕ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ಎಂ. ದಾರುಕೇಶ, ಬೀಜ ನಿಗಮದ ನಿರ್ದೇಶಕ ಸಾವಜ್ಜಿ ರಾಜೇಂದ್ರಪ್ರಸಾದ್, ಎಪಿಎಂಸಿ ಅಧ್ಯಕ್ಷ ಹರಾಳು ನಂಜಪ್ಪ, ಶ್ಯಾನುಭೋಗರ ಗುರುಮೂರ್ತಿ ಮಾತನಾಡಿದರು.

ಲೇಖಕ ಗಜಾಪುರ ಭೀಮಣ್ಣ ಅವರ ‘ಕರಿಯಮ್ಮದೇವಿ ಹಾಡುಗಳ ಧ್ವನಿಸುರುಳಿ’ಯನ್ನು ಬಿಡುಗಡೆ ಮಾಡಲಾಯಿತು.

ಬೆಣ್ಣಿಹಳ್ಳಿ ಮಠದ ಪಂಚಾಕ್ಷರಿ ಸ್ವಾಮೀಜಿ, ಉತ್ತಂಗಿ ಮಠದ ಸೋಮಶೇಖರ ಸ್ವಾಮೀಜಿ, ಅನಿಲ್ ಹೊಸಮನಿ, ಚಿರಬಿ ಕೊಟ್ರೇಶ್, ಎಚ್.ಎಂ. ಅಶೋಕ್, ಎಸ್. ಮಲ್ಲಿನಾಥ್, ವಿ. ರಾಮನಗೌಡ, ಉತ್ತಂಗಿ ಕೊಟ್ರಗೌಡ , ಆಚೆಮನಿ ಮಲ್ಲಿಕಾರ್ಜುನ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-25-1401583801

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.