ಕೊಟ್ಟೂರು: ಪಟ್ಟಣದ ಎಪಿಎಂಸಿ ಆವರಣದಲ್ಲಿ ಬೆಂಬಲ ಬೆಲೆ ಅಡಿಯಲ್ಲಿ ಎರಡನೇ ರಾಗಿ ಖರೀದಿ ಕೇಂದ್ರವನ್ನು ತೆರೆಯಲಾಗುವುದು ಎಂದು ಜಿಲ್ಲಾ ಆಹಾರ ಇಲಾಖೆ ಉಪ ನಿರ್ದೇಶಕ ಡಿ.ರಿಯಾಜ್ ಹೇಳಿದರು.

ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ, ತೂಕ ಪರಿಶೀಲಿಸಿ ಅವರ ಮಾತನಾಡಿದರು.

ಎಪಿಎಂಸಿ ಅಧ್ಯಕ್ಷ ಹರಾಳು ನಂಜಪ್ಪ ಮಾತನಾಡಿ, ‘ರೈತರು ಟ್ರ್ಯಾಕ್ಟರ್ನಲ್ಲಿ ರಾಗಿ ತಂದು ನಾಲ್ಕೈದು ದಿನ ಹಗಲು ರಾತ್ರಿ ತಮ್ಮ ಸರದಿ ಬರುವ ತನಕ ಕಾದು ಮಾರಾಟ ಮಾಡಬೇಕಾದ ಅನಿವಾರ್ಯ ಇದೆ’ ಎಂದು ಗಮನಕ್ಕೆ ತಂದರು.

ಇದಕ್ಕೆ ಸ್ಪಂದಿಸಿದ ಉಪ ನಿರ್ದೇಶಕ ರಿಯಾಜ್, ‘ಶುಕ್ರವಾರವಾರದಿಂದಲೇ ಎಪಿಎಂಸಿಯಲ್ಲಿ ಮತ್ತೊಂದು ರಾಗಿ ಖರೀದಿ ಕೇಂದ್ರ ತೆರೆಯಲಾಗುವುದು. ತಾಲ್ಲೂಕಿನ ಉಜ್ಜಯಿನಿ ಗ್ರಾಮದಲ್ಲಿ ಸಹ ರಾಗಿ ಖರೀದಿ ಕೇಂದ್ರ ಆರಂಭಿಸುವಂತೆ ಮನವಿ ಬಂದಿದ್ದರಿಂದ ಅಲ್ಲಿ ಆರಂಭಿಸಲಾಗಿದೆ’ ಎಂದರು.

‘ಮುಂದಿನ ವರ್ಷ ಕೊಟ್ಟೂರು ತಾಲ್ಲೂಕಿನ 14 ಸಹಕಾರ ಸೊಸೈಟಿಯಲ್ಲಿಯೂ ರಾಗಿ ಖರೀದಿ ಕೇಂದ್ರ ಆರಂಭಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದರು.

‘ಕೊಟ್ಟೂರಿನಲ್ಲಿ ರಾಗಿ ಬೆಂಬಲ ಬೆಲೆಗೆ ಮಾರಾಟ ಮಾಡಲು 2,761 ರೈತರು ನೋಂದಣೆ ಮಾಡಿದ್ದು, ಇದರಲ್ಲಿ ಶೇ 50ರಷ್ಟು ರೈತರ ರಾಗಿ ಖರೀದಿಸಲಾಗಿದೆ. ಉಜ್ಜಯಿನಿಯಲ್ಲಿ 941 ರೈತರು ನೋಂದಣಿ ಮಾಡಿದ್ದಾರೆ’ ಎಂದರು.

ಎಪಿಎಂಸಿ ಉಪಾಧ್ಯಕ್ಷ ಎಂ. ಶಿವಣ್ಣ, ಕಾರ್ಯದರ್ಶಿ ವೀರಣ್ಣ, ಹ್ಯಾಳ್ಯಾ ಕೊಟ್ರೇಶ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-25-376761604

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.