ಕೊಟ್ಟೂರು: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ತೆರೆದಿರುವ ರಾಗಿ ಖರೀದಿ ಕೇಂದ್ರದಲ್ಲಿ ಬೆಂಬಲ ಬೆಲೆ ಅಡಿಯಲ್ಲಿ ಮಾರಾಟ ಮಾಡಿದ ಹಣ ಇದುವರೆಗೂ ಪಾವತಿಯಾಗದಿರುವುದು ಮಾರಾಟ ಮಾಡಿದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಒಂದು ಕ್ವಿಂಟಲ್ಗೆ ₹4,886 ಬೆಲೆ ಅಡಿಯಲ್ಲಿ ರಾಗಿ ಖರೀದಿಸಲು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ಸರ್ಕಾರ ಆದೇಶಿಸಿತ್ತು. ಕೊಟ್ಟೂರು ಕೇಂದ್ರದಲ್ಲಿ 71 ಸಾವಿರ ಕ್ವಿಂಟಲ್ ಹಾಗೂ ಉಜ್ಜಯಿನಿ ಕೇಂದ್ರದಲ್ಲಿ 24.247 ಕ್ವಿಂಟಲ್ ಖರೀದಿಸಲಾಗಿತ್ತು. ಎರಡೂ ಕೇಂದ್ರಗಳಿಂದ ಒಟ್ಟು ₹49 ಕೋಟಿ ಹಣ ರೈತರಿಗೆ ಪಾವತಿಸಬೇಕಾಗಿದೆ.

ಖರೀದಿಯ ಆರಂಭದ ದಿನದಿಂದ ಮಾರ್ಚ್ 12ರ ವರೆಗೆ ಮಾರಾಟ ಮಾಡಿದ ರೈತರಿಗೆ ಮಾತ್ರ ಕೊಟ್ಟೂರು ಕೆಂದ್ರದಿಂದ ₹ 4.88 ಕೋಟಿ, ಉಜ್ಜಯಿನಿ ಕೇಂದ್ರದಿಂದ ₹ 1.38 ಕೋಟಿ ಹಣ ಪಾವತಿಯಾಗಿರುವುದು ಬಿಟ್ಟರೆ ನಂತರ ಮಾರಾಟ ಮಾಡಿದ ರೈತರಿಗೆ ಇದುವರೆಗೂ ಹಣ ಸಂದಾಯವಾಗಿಲ್ಲ.

ದುಬಾರಿ ಬೀಜ, ಗೊಬ್ಬರ ಹಾಗೂ ಕೂಲಿ ಆಳುಗಳಿಂದ ರೋಸಿ ಹೋಗಿರುವ ರೈತರು ಸಾಲ ಸೋಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಾರಾಟ ಮಾಡಿದರೆ ಸಕಾಲಕ್ಕೆ ಹಣ ಪಾವತಿಯಾಗದಿರುವುದರಿಂದ ಸಂಕಷ್ಟದಿಂದ ಬಳಲುವಂತಾಗಿದೆ ಕೂಡಲೇ ಸಂಬಂಧಿಸಿದ ಇಲಾಖಾಧಿಕಾರಿಗಳು ಹಣ ಪಾವತಿಯಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎನ್. ಭರಮಣ್ಣ ಒತ್ತಾಯಿಸಿದ್ದಾರೆ.

‘ಖರೀದಿ ಕೇಂದ್ರದ ಬಳಿ ಸರತಿಯಂತೆ ನಾಲ್ಕೈದು ದಿನಗಳ ಕಾಲ ಕಾದು ವಾಹನ ಬಾಡಿಗೆ ಹಾಗೂ ಉಟೋಪಚಾರ ಮುಂತಾದ ಖರ್ಚುಗಳನ್ನು ನಿಭಾಯಿಸಿ ಮಾರಾಟ ಮಾಡಿದರೆ ಇದುವರೆಗೂ ಹಣ ಪಾವತಿಯಾಗದಿರುವುದರಿಂದ ನಮಗೆ ದೊರೆಯುವ ಲಾಭವು ಅಷ್ಟಕ್ಕಷ್ಟೆ’ ಎಂದು ಹಾರಕನಾಳ ಗ್ರಾಮದ ರೈತ ಪಿ.ಎಂ.ವೀರಭದ್ರಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲೇ ಬೆಂಬಲ ಬೆಲೆ ಹಣವನ್ನು ಪಾವತಿಸಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಭಾಗದ ರೈತರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-25-2121160219

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.