ಕೊಟ್ಟೂರು: ಜನತೆಗೆ ಎಲ್ಲಾ ಭಾಗ್ಯಗಳನ್ನು ನೀಡುತ್ತಿರುವ ಸರ್ಕಾರ ತಾಲ್ಲೂಕಿ ನಾದ್ಯಂತ ಬಹುತೇಕ ರಸ್ತೆಗಳಿಗೆ ದುರಸ್ತಿ ಭಾಗ್ಯ ಕರುಣಿಸಿಲ್ಲ. ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿರುವ ತಗ್ಗು ಗುಂಡಿಗಳ ಮಧ್ಯೆ ರಸ್ತೆಯ ಜಾಡನ್ನು ಹುಡುಕುತ್ತಾ ಚಾಲಕರು ವಾಹನ ಚಲಾಯಿಸುವಂತಹ ಪರಿಸ್ಥಿತಿ ಕಾಣಬಹುದಾಗಿದೆ.

ಈಚೆಗೆ ಕೆಲವು ರಸ್ತೆಗಳು ದುರಸ್ತಿ ಭಾಗ್ಯ ಕಂಡರೂ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಬಿಲ್ಲಿನ ಮೊತ್ತ ಪಾವತಿಸುವುದಕ್ಕೂ ಮೊದಲೇ ತಗ್ಗು ಗುಂಡಿಗಳು ಪ್ರತ್ಯಕ್ಷವಾಗಿ ಕಳಪೆ ಕಾಮಗಾರಿಗೆ ಸಾಕ್ಷಿಯಾಗಿರುವುದು ಕಾಣಬಹುದಾಗಿದೆ.

ಗಡಿ ಗ್ರಾಮವಾಗಿರುವ ಹಗರಿಗಜಾಪುರ ಗ್ರಾಮ ಹರಪನಹಳ್ಳಿ ತಾಲ್ಲೂಕಿನ ವ್ಯಾಪ್ತಿಗೊಳಪಟ್ಟಿದ್ದರೂ ಕೊಟ್ಟೂರಿನಿಂದ ಏಳು ಕಿ.ಮೀ. ಸಮೀಪದಲ್ಲಿರುವುದರಿಂದ ಕಚೇರಿ ಕೆಲಸ ಕಾರ್ಯಗಳಿಗೆ ಹರಪನಹಳ್ಳಿ ಹಾಗೂ ವ್ಯಾಪಾರ ವಹಿವಾಟು ಹಾಗೂ ಶಾಲಾ ಕಾಲೇಜುಗಳಿಗೆ ಗ್ರಾಮಸ್ಥರು ಕೊಟ್ಟೂರನ್ನು ಅವಲಂಬಿಸಿದ್ದಾರೆ.

ಹಗರಿಗಜಾಪುರ ಗ್ರಾಮದಿಂದ ಹರಪನಹಳ್ಳಿ ಕ್ಷೇತ್ರಕ್ಕೆ ಒಳಪಡುವ ಮೂರು ಕಿ.ಮೀ. ರಸ್ತೆ ನಿರ್ಮಾಣವಾಗಿದ್ದು ಬಿಟ್ಟರೆ ಕೊಟ್ಟೂರು ತಾಲ್ಲೂಕಿನ ವ್ಯಾಪ್ತಿಗೊಳಪಡುವ ಉಳಿದ ನಾಲ್ಕು ಕಿ.ಮೀ. ರಸ್ತೆ ಇಂದಿಗೂ ದುರಸ್ತಿ ಭಾಗ್ಯ ಕಾಣದಿರುವುದರಿಂದ ಹಗರಿಗಜಾಪುರ ಹಾಗೂ ಈ ರಸ್ತೆಗೆ ತಾಗಿಕೊಂಡಿರುವ ಗೌರಿಪುರ, ಬಸವನಾಳು, ಕೆಸರಹಳ್ಳಿ, ಬಳಗಾನೂರು ಮುಂತಾದ ಗ್ರಾಮಗಳ ಜನರು ಸಂಚರಿಸುವಾಗ ತೊಂದರೆಯಾಗಿದೆ.

’ರಸ್ತೆಗಳ ದುಸ್ಥಿತಿಯಿಂದ ನಿತ್ಯ ಅಪಘಾತಗಳು ನಡೆಯುತ್ತಿವೆ. ಸಕಾಲಕ್ಕೆ ಶಾಲಾ ಕಾಲೇಜುಗಳಿಗೆ ಹಾಗೂ ಕಚೇರಿಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥರಾದ ಜಿ.ಎಸ್.ಎಂ.ಮಹಾಲಿಂಗಯ್ಯ, ಎಂ.ಎಂ.ರಾಜಯ್ಯ ಹಾಗೂ ಸಬರದ ನಾಗವೇಣಿ,ಅರಸಿಕೆರೆ ಶಿವಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಕೊಟ್ಟೂರು ಹಗರಿಗಜಾಪುರ ಮಾರ್ಗ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದು ಇದನ್ನು ಪ್ರಗತಿ ಪಥ ಯೋಜನೆಯಡಿ ರಸ್ತೆ ನಿರ್ಮಾಣ ಮಾಡಲು ಕ್ರಿಯಾಯೋಜನೆಯನ್ನು ಇಲಾಖಾ ಮೇಲಾಧಿಕಾರಿಗಳಿಗೆ ಸಲ್ಲಿಸಿ ದ್ದೇವೆ. ಶೀಘ್ರದಲ್ಲಿಯೇ ಕಾಮಗಾರಿ ಚಾಲನೆಗೊಳ್ಳಲಿದೆ ಎಂದು ಜಿ.ಪಂ.ಎಇಇ ಮಲ್ಲಿಕಾರ್ಜುನಸ್ವಾಮಿ ತಿಳಿಸಿದರು.

ತಾಲ್ಲೂಕಿನ ರಸ್ತೆಗಳ ಸ್ಥಿತಿ ಗತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಇನ್ನಾದರೂ ರಸ್ತೆಗಳ ದುರಸ್ತಿಗೆ ಮುಂದಾಗಬೇಕೆಂಬುದು ಜನತೆಯ ಒತ್ತಾಸೆಯಾಗಿದೆ.

ನಮ್ಮ ಕ್ಷೇತ್ರಕ್ಕೆ ಒಳಪಡುವ ರಸ್ತೆಗಳ ಅವ್ಯವಸ್ಥೆಯ ಬಗ್ಗೆ ಗಮನವಿದ್ದು, ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆಕೆ.
ನೇಮರಾಜನಾಯ್ಕ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.