ಕೂಡ್ಲಿಗಿ: ‘12ನೇ ಶತಮಾನದಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಸ್ವಾತಂತ್ರ್ಯಕ್ಕೆ ವಚನಗಳ ಮೂಲಕ ಶ್ರಮಿಸಿದವರು ಬಸವಣ್ಣನವರು’ ಎಂದು ವೀರಶೈವ ಮುಖಂಡ ಜಿ. ಶಿವ ಪ್ರಸಾದ್ ಗೌಡ ಹೇಳಿದರು.

ತಾಲ್ಲೂಕಿನ ಗುಡೇಕೋಟೆ ಗ್ರಾಮದಲ್ಲಿ ಸೋಮವಾರ ನಡೆದ ಬಸವೇಶ್ವರ ಜಯಂತಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಸರ್ವರಲ್ಲೂ ಸಮಾನತೆ ಹೊಂದಿದ್ದ ವೀರಶೈವ ಧರ್ಮದ ಸಿದ್ದಾಂತಗಳನ್ನು ಮೆಚ್ಚಿ ಬಸವಣ್ಣನವರು ವೀರಶೈವ ಧರ್ಮವನ್ನು ಅನುಸರಣೆ ಮಾಡಿದರು’ ಎಂದರು.

ಅನುಭವ ಮಂಟಪದ ಮೂಲಕ ತಳ ಸಮುದಾಯದ ಜನರಿಗೆ ಧಾರ್ಮಿಕ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿದರು. ಇದರಿಂದ ಪ್ರೇರಿತರಾದ ಶರಣರು ತಮ್ಮ ಕಾಯಕದ ಮೂಲಕ ಗುರುತಿಸಿಕೊಂಡು ಸಮಾಜವನ್ನು ತಿದ್ದುವ ಕೆಲಸ ಮಾಡಿದರು’ ಎಂದು ತಿಳಿಸಿದರು.

ಈ ವೇಳೆ ಗ್ರಾಮದ ಪಾರ್ವತಿ ಪರಮೇಶ್ವರ ದೇವಸ್ಥಾನದಿಂದ ಹೊರಟ ಎತ್ತಿನ ಮೆರವಣಿಗೆ ರಾಂಪುರ ರಸ್ತೆಯ ತಿರುಗು ಬಸವಣ್ಣನ ಕಟ್ಟೆಯವರೆಗೂ ಸಾಗಿತು. ತಿರುಗು ಬಸವಣ್ಣನ ವೃತ್ತಕ್ಕೆ ಜಗಜ್ಯೋತಿ ಬಸವೇಶ್ವರ ವೃತ್ತ ಎಂದು ನಾಮಕರಣ ಮಾಡಲಾಯಿತು.

ದಿನ್ನೆ ನಾಗರಾಜ್, ಅಂಗಡಿ ಈಶ್ವರ್, ಮಠದ ಶಿವಕುಮಾರ್ ಸ್ವಾಮಿ, ಎರ್ರಿಸ್ವಾಮಿ, ಪೂಜಾರ ಸಿದ್ದಣ್ಣ, ಎಲೆ ಕರಿಬಸಜ್ಜಯ್ಯ, ಹೋಟೆಲ್ ವೀರಭದ್ರಪ್ಪ, ಜಿ. ನಿಂಗಣ್ಣ, ಜೋಡುಗಪ್ಲೆ ರಮೇಶ, ಪಿ. ಪಂಚಾಕ್ಷರಿ, ಪುಂಡಿ ವೀರೇಂದ್ರ, ಜೋಡುಗಪ್ಲೆ ನಾಗೇಶ್, ಕರವೇ ಅಧ್ಯಕ್ಷ ಜೆ.ಶಿವಕುಮಾರ್, ಪಿ. ಮರಳುಸಿದ್ದಪ್ಪ, ಪಿ.ಶಿವಕುಮಾರ್, ಬೇಕರಿ ಸುರೇಶ್, ಗುಂಡಾಲಿ ಲಿಂಗಪ್ಪ, ಮಳ್ಳಪ್ಪ, ಚತ್ರಿಕೆ ಕೊಟ್ರೇಶ್, ಎಂ.ವಿರುಪಾಕ್ಷಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-25-1090805323

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.