ಕೂಡ್ಲಿಗಿ: ತಾಲ್ಲೂಕಿನ ಜರಿಮಲೆ ನ್ಯಾಯಬೆಲೆ ಅಂಗಡಿ ಅವ್ಯವಹಾರ ಸೇರಿದಂತೆ ತಾಲ್ಲೂಕಿನ ವಿವಿಧ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಂಘದ ಪದಾಧಿಕಾರಿಗಳು ಸೋಮವಾರ ತಹಶೀಲ್ದಾರ್ ವಿ.ಕೆ. ನೇತ್ರಾವತಿ ಅವರಿಗೆ ಮನವಿ ಸಲ್ಲಿಸಿದರು.

ಎಐಕೆಎಸ್ ರಾಜ್ಯ ಉಪಾಧ್ಯಕ್ಷ ಎಚ್.ವೀರಣ್ಣ ಮಾತನಾಡಿ, ‘ತಾಲ್ಲೂಕಿನ ಜರಿಮಲೆ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಬಯೋಮೆಟ್ರಿಕ್ ಪಡೆದು ಎರಡು ತಿಂಗಳ ಅಕ್ಕಿ ನೀಡದೆ ಅವ್ಯವಹಾರ ಮಾಡಿದ್ದಾರೆ. ಹರವದಿ, ಕಾಮಯ್ಯನಹಟ್ಟಿ, ಗೆವ್ದಲಗಟ್ಟೆ ಗ್ರಾಮಗಳಲ್ಲಿ ಎರಡು ತಿಂಗಳು ಹಾಗೂ ದಿಬ್ಬದಹಳ್ಳಿಯಲ್ಲಿ ಒಂದು ತಿಂಗಳ ಪಡಿತರ ನೀಡದೆ ವಂಚಿಸಿದ್ದಾರೆ’ ಎಂದು ಆರೋಪಿಸಿದರು.

ತಾಲ್ಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ ಪಟ್ಟಣದಲ್ಲಿ ಬೀದಿದೀಪ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಿ ಆರು ತಿಂಗಳು ಕಳೆದರೂ ಯಾವುದೇ ಕಾರ್ಯ ಪೂರ್ಣಗೊಂಡಿಲ್ಲ. ಪಟ್ಟಣದ ಎಪಿಎಂಸಿ ಖರೀದಿ ಕೇಂದ್ರದಲ್ಲಿ ನಡೆಯುತ್ತಿರುವ ಅವ್ಯವಹಾರ ತಡೆಯಬೇಕು ಎಂದು ಆಗ್ರಹಿಸಿದರು.

ಸಂಘದ ತಾಲ್ಲೂಕು ಕಾರ್ಯದರ್ಶಿ ಕರಿಯಪ್ಪ, ವಕೀಲ ಸಿದ್ದಲಿಂಗಪ್ಪ, ಸಿದ್ದಲಿಂಗಸ್ವಾಮಿ, ಎಚ್. ಚಂದ್ರಪ್ಪ, ಆರ್.ರಮೇಶ್ ಗೌಡ, ಪಾಪಯ್ಯ, ಚಂದ್ರಶೇಖರ್, ಭಾಗ್ಯಮ್ಮ, ಯಲ್ಲಮ್ಮ, ಹನುಮಕ್ಕ, ವಿ. ಬಸವರಾಜ, ಮಂಜಮ್ಮ, ಪರಮೇಶ್, ಹೇಮಣ್ಣ, ರವಿಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-25-2038578986

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.