ಕೂಡ್ಲಿಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಸೋಮವಾರ ಸಂಜೆ ಉತ್ತಮ ಮಳೆಯಾಗಿದ್ದು, ಸಿಡಿಲಿಗೆ ಎತ್ತು ಬಲಿಯಾಗಿದೆ.

ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಆರಂಭವಾದ ಮಳೆ ಗುಡುಗು, ಸಿಡಿಲು ಗಾಳಿಯೊಂದಿಗೆ ಕೆಲ ಹೊತ್ತು ಸುರಿಯಿತು. ಬಾರಿ ಗಾಳಿಗೆ ತಾಲ್ಲೂಕಿನ ಅಮರದೇವರಗುಡ್ಡ ಗೊಲ್ಕರಹಟ್ಟಿ, ಬಣವಿಕಲ್ಲು, ಅಗ್ರಹಾರ ಗ್ರಾಮ ಸೇರಿದಂತೆ ವಿವಿಧೆಡೆ ಪಪ್ಪಾಯಿ, ಅಡಿಕೆ ಸೇರಿದಂತೆ ವಿವಿಧ ಬೆಳೆಗಳು ನೆಲಕ್ಕರುಳಿವೆ. ತಾಲ್ಲೂಕಿನ ಗುಣಸಾಗರದ ಮೊರಬನಹಳ್ಲಿ ಈರಣ್ಣ ಎಂಬುವವರಿಗೆ ಸೇರಿದ ಎತ್ತು ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದೆ.

ಎರಡು ಮೂರು ದಿನಗಳಿಂದ ಹೆಚ್ಚಾದ ಬಿಸಿಲಿನ ತಾಪದಿಂದ ಬಸವಳಿದಿದ್ದ ಜನರಿಗೆ ಸಂಜೆ ಬಿದ್ದ ಮಳೆ ತುಸು ನಮ್ಮದಿಯನ್ನು ತಂದಿತಾದರೂ, ಗಾಳಿ ಸಂಪೂರ್ಣ ನಿಂತಿದ್ದರಿಂದ ಮತ್ತಷ್ಟು ಶಕೆ ಹೆಚ್ಚಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-25-920171946

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.