ಹೊಸಪೇಟೆ (ವಿಜಯನಗರ): ರಾಜ್ಯದ ಎಲ್ಲೆಡೆಯಂತೆ ಜಿಲ್ಲೆಯಲ್ಲೂ ಬೀಗ ಹಾಕಿದ ಮನೆಗಳ ಮೇಲೆ ಕಣ್ಣಿಡುವ ‘ಲಾಕ್ಡ್ ಹೌಸ್ ಬೀಟ್ ಸಿಸ್ಟಮ್’ ಮೇ 4ರಿಂದ ಜಾರಿಗೆ ಬಂದಿದ್ದು, ಪ್ರತಿದಿನ ಸರಾಸರಿ ಏಳಕ್ಕೂ ಅಧಿಕ ಕರೆಗಳು ಸಹಾಯವಾಣಿಗೆ ಬರುತ್ತಿರುವುದು ದಾಖಲಾಗಿದೆ.

8277977777 ವಾಟ್ಸ್ಆ್ಯಪ್ ಸಂಖ್ಯೆಗೆ ಮನೆಯಿಂದ ಹೊರಗೆ ಹೋಗುವ ಮತ್ತು ಮರಳಿ ಬರುವ ದಿನಾಂಕವನ್ನು ತಿಳಿಸಿ, ಮನೆಯ ವಿಳಾಸ ಮತ್ತು ಲೊಕೇಶನ್ ಶೇರ್ ಮಾಡಿ, ಮನೆಯ ಜತೆಗೆ ಒಂದು ಸೆಲ್ಫಿ ಅಥವಾ ಫೋಟೊ ಕಳುಹಿಸಿದರೆ ಸಾಕು, ಮನೆಯ ಸುರಕ್ಷತೆಯ ಹೊಣೆ ಆಯಾ ಠಾಣೆ ವ್ಯಾಪ್ತಿಯ ಪೊಲೀಸರಿಗೆ ಇರುತ್ತದೆ, ಮರಳಿ ಬಂದ ನಂತರ ಮಾಹಿತಿ ನೀಡಿದರೆ ಎಲ್ಲರಿಗೂ ನೆಮ್ಮದಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ತಿಳಿಸಿದರು.

ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳಿಗೆ ಮಾತ್ರ ಇದು ಸೀಮಿತವಲ್ಲ, ದೂರದ ಊರುಗಳಲ್ಲಿ ನೆಲೆಸಿರುವವರು ಸಹ ಈ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು. ಒಂದು ಬಾರಿ ಈ ವಾಟ್ಸ್ಆ್ಯಪ್ನಲ್ಲಿ ಮಾಹಿತಿ ಅಪ್ಲೋಡ್ ಮಾಡಿದ ಬಳಿಕ ಆ ಮನೆಯ ಸಂಪೂರ್ಣ ಹೊಣೆ ಪೊಲೀಸರದ್ದಾಗಿರುತ್ತದೆ, ಮನೆ ಮಂದಿ ನಿಶ್ಚಿಂತೆಯಿಂದ ಪ್ರವಾಸಕ್ಕೋ, ಬಂಧುಮಿತ್ರರ ಮನೆಗಳಿಗೋ, ವಿದೇಶಗಳಿಗೋ ತೆರಳಬಹುದು ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನಲ್ಲಿ ಈಚಿನ ದಿನಗಳಲ್ಲಿ ಕಳವು ಪ್ರಕರಣಗಳು ಹೆಚ್ಚಾಗಿದ್ದವು. ಹರಪನಹಳ್ಳಿ ಶಾಸಕರ ಮನೆಯ ಬಳಿಯಲ್ಲೇ ಕಳವು ನಡೆದಿತ್ತು. ಇತರ ಕೆಲವು ತಾಲ್ಲೂಕುಗಳಲ್ಲಿ ಸಹ ಕೆಲವು ಕಳವು ಮನೆಗಳವು ಪ್ರಕರಣಗಳು ದಾಖಲಾಗಿದ್ದವು. 15 ದಿನದ ಹಿಂದೆ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ ಹರಪನಹಳ್ಳಿಯ ಐದು ತಿಂಗಳ ಹಿಂದಿನ ಮನೆಗಳವು ಪ್ರಕರಣವನ್ನು ಭೇದಿಸಿದ್ದರು. ಆದರೆ ಬಳಿಕ ನಡೆದ ಕೆಲವು ಮನೆಗಳವು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚುವ ಕೆಲಸ ಇನ್ನೂ ನಡೆಯುತ್ತಿದೆ. ಇಂತಹ ಸಂದರ್ಭದಲ್ಲೇ ಬೀಗ ಹಾಕಿದ ಮನೆಗಳ ಮೇಲೆ ಕಣ್ಗಾವಲು ಇಡುವ ವ್ಯವಸ್ಥೆ ಜಾರಿಗೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.