ಮರಿಯಮ್ಮನಹಳ್ಳಿ: ಹೋಬಳಿ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ರಸ್ತೆ ವಿಸ್ತರಣೆಗೊಳಿಸುವ ಕಾಮಗಾರಿ ನಾಲ್ಕಾರು ವರ್ಷಗಳಿಂದ ನಡೆಯದೆ, ಇದೀಗ ಕುಂಟುತ್ತ ಸಾಗಿರುವುದರಿಂದ ಜನ ನಿತ್ಯ ಆತಂಕದಲ್ಲೇ ಸಾಗುವಂತಾಗಿದೆ. ಈ ಆತಂಕದ ಬೆಂಕಿಗೆ ತುಪ್ಪ ಸುರಿದಂತಹ ಘಟನೆ ಭಾನುವಾರ ಸರಣಿ ಅಪಘಾತದ ರೂಪದಲ್ಲಿ ನಡೆದೇಬಿಟ್ಟಿದೆ.

ಹೋಬಳಿ ವ್ಯಾಪ್ತಿಯಲ್ಲಿ ಹೆದ್ದಾರಿ ಸುಮಾರು 30ಕಿ.ಮೀನಷ್ಟು ಹಾದು ಹೋಗಿದ್ದು, 114-ಡಣಾಪುರ ಬಳಿಯ ಬಿಎಂಎಂ ಇಸ್ಪಾತ್ ಕಾರ್ಖಾನೆ ಬಳಿ ತುಂಗಭದ್ರಾ ಜಲಾಶಯದ ಹಿನ್ನೀರಿಗೆ ಸೇರುವ ಹಳ್ಳಕ್ಕೆ ನಿರ್ಮಿಸಿದ್ದ ಸೇತುವೆ ಬಳಿ ಮತ್ತೊಂದು ಸೇತುವೆ ನಿರ್ಮಾಣ ಕಾಮಗಾರಿ ಸೇರಿದಂತೆ ಅಂಡರ್ ಪಾಸ್, ಸರ್ವಿಸ್ ರಸ್ತೆ ಕಾಮಗಾರಿಗಳು ಒಟ್ಟೊಟ್ಟಿಗೆ ನಡೆಯುತ್ತಿದೆ. ಡಣಾಪುರ ಬಳಿಯ ಸೇತುವೆಯಿಂದ ಕನಕ ಪೆಟ್ರೋಲ್ ಬಂಕ್ವರೆಗೆ ಸುಮಾರು ಒಂದೂವರೆ ಕಿ.ಮೀನಷ್ಟು ದೂರ ಹೆದ್ದಾರಿಯಲ್ಲಿ ಇದೀಗ ಏಕಪಥ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ.

ಹನುಮನಹಳ್ಳಿಯಿಂದ ಏಕಾಏಕಿ ವಾಹನ ಸವಾರರು ದ್ವಿಪಥದಿಂದ ಸೇತುವೆ ಮೇಲೆ ಏಕಪಥಕ್ಕೆ ಹೊರಳಬೇಕಾದ್ದರಿಂದ ‘ದ್ವಿಪಥದಿಂದ ಏಕಪಥ, ಅಪಘಾತ ನಿಶ್ವಿತ’ ಎಂಬಂತಾಗಿದೆ. ಇದೇ ಕಾರಣದಿಂದಾಗಿ ವಾಹನಗಳ ದಟ್ಟ ಸಂಚಾರದಿಂದಾಗಿ ಈ ಸ್ಥಳದಲ್ಲಿ ನಿತ್ಯ ಒಂದಿಲ್ಲ ಒಂದು ಅಪಘಾತಗಳು ಸಂಭವಿಸುತ್ತಿವೆ.

ಸೇತುವೆ, ಅಂಡರ್ ಪಾಸ್, ಸರ್ವಿಸ್ ರಸ್ತೆ ಕಾಮಗಾರಿ ಆರಂಭಿಸಿ ಆರು ತಿಂಗಳಾದರೂ ಯಾವುದೇ ಕಾಮಗಾರಿ ಪೂರ್ಣವಾಗದಿರುವುದು ಅಪಘಾತಗಳು ಹೆಚ್ಚಾಗಲು ಕಾರಣವಾಗಿದೆ ಎನ್ನಲಾಗುತ್ತಿದೆ. ಈ ಸ್ಥಳದಲ್ಲಿ ವೇಗ ನಿಯಂತ್ರಣ ಹಾಗೂ ಸುರಕ್ಷತಾ ಕ್ರಮಗಳ ಫಲಕಗಳಿದ್ದರೂ, ಸಂಚಾರ ದಟ್ಟಣೆ, ಅಧಿಕ ವೇಗದಿಂದ ಸಾಗುವುದು ಹಾಗೂ ಏಕಪಥ ರಸ್ತೆಯಲ್ಲಿ ವಾಹನಗಳನ್ನು ಹಿಂದೆ ಹಾಕುವ ಭರದಲ್ಲಿ ಅಪಘಾತಗಳು ಹೆಚ್ಚಾಗಲು ಕಾರಣವಾಗುತ್ತಿದೆ.

ಇದೇ ಸ್ಥಳದಲ್ಲಿ ಕಳೆದ ಮಾರ್ಚ್ ತಿಂಗಳು ನಡೆದ ಪ್ರತ್ಯೇಕ ಅಪಘಾತಗಳಲ್ಲಿ ನಾಲ್ಕು ಜನ ಮೃತಪಟ್ಟು, 9 ಜನ ಗಾಯಗೊಂಡಿದ್ದರು. ಅಪಘಾತಗಳಿಗೆ ಮನುಷ್ಯರಷ್ಟೇ ಅಲ್ಲದೆ ಪ್ರಾಣಿಗಳು ಸಹ ಬಲಿಯಾಗಿದ್ದು, ಒಂದು ರೀತಿಯಲ್ಲಿ ಈ ಹೆದ್ದಾರಿ ಸಾವಿನ ದಾರಿಯಾಗಿ ಮಾರ್ಪಟ್ಟಿದೆ ಎಂಬುದು ಸಾರ್ವಜನಿಕ ವಲಯದ ಮಾತಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-25-1848214471

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.