ಮರಿಯಮ್ಮನಹಳ್ಳಿ: ಪಟ್ಟಣದಲ್ಲಿ ನಡೆದ ಜೋಡಿ ರಥೋತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಬಯಲು ಕುಸ್ತಿ ಪಂದ್ಯಾವಳಿಗಳು ನೋಡುಗರ ಗಮನ ಸೆಳೆದವು.

ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ಬಯಲು ಅಖಾಡದಲ್ಲಿ ಭಾಗವಹಿಸಿದ್ದರು. ಬ್ರೆಜಿಲ್ ದೇಶದ ಅಂತರರಾಷ್ಟ್ರೀಯ ಕುಸ್ತಿಪಟು ಪ್ರೆಡ್ರಿಕ್ ಮಿಲಾ ಭಾಗವಹಿಸಿದ್ದು ನೋಡುಗರ ಆಕರ್ಷಣೆ ಹೆಚ್ಚಿಸಿತ್ತು.

ರಾಣೆಬೆನ್ನೂರಿನ ಕಾರ್ತಿಕ್ ಕಾಟೆ ಅವರು ಪಂಜಾಬ್ ರಾಜ್ಯದ ಹಾಸಿಕ್ ಸಿಂಗ್ ಅವರೊಂದಿಗೆ ಸೆಣಸಾಡಿ ₹1 ಲಕ್ಷ ಬಹುಮಾನ ಪಡೆದರು. ದಾವಣಗೆರೆಯ ಬಸುಪಾಟೀಲ ಅವರು ಬ್ರೆಜಿಲ್ನ ಫ್ರೆಡ್ರಿಕ್ ಮಿಲಾ ಅವರೊಂದಿಗೆ ಸೆಣಸಾಡಿ ₹50 ಸಾವಿರ ಬಹುಮಾನ ಪಡೆದರು.

ಜಿಲ್ಲಾಮಟ್ಟದ ಕುಸ್ತಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಹೊಸಪೇಟೆಯ ಪರಶುರಾಮ ಹಾಗೂ ಬಲ್ಲಾಹುಣ್ಸಿ ಸುನಿಲ್ ಅವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

ಉದ್ದೇಕಲ್ ವೆಂಕಟೇಶ್, ಸೈಪುಲ್ಲಾ, ವೆಂಕಟೇಶ್, ಸಣ್ಣ ದುರುಗಪ್ಪ ಸೇರಿದಂತೆ ಇತರರು ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಸಿಪಿಐ ವಿಕಾಸ್ ಲಮಾಣಿ ಅವರು ಸೂಕ್ತ ಬಂದೋಬಸ್ತ್ ವಹಿಸಿದ್ದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಕೆ.ಶಿವಮೂರ್ತಿ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ಈ ವೇಳೆ ಚಿದ್ರಿ ಸತೀಶ್, ಎಲ್.ಪರಮೇಶ್ವರಪ್ಪ, ಪಿ.ಸೋಮಪ್ಪ, ಮಜ್ಜಿಗೆ ನಾಗರಾಕ್, ಎಲ್.ವಸಂತ್, ಮರಡಿ ಸುರೇಶ್, ಮೊಹಮ್ಮದ್, ಎಲ್.ಹನುಮಂತ, ಆರ್.ಮಂಜುನಾಥ್, ಕೆಂಚಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-25-891442696

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.