ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾನಹೊಸಹಳ್ಳಿ | ಮಾನಸಿಕ ಅಸ್ವಸ್ಥೆಯನ್ನು ವಿವಸ್ತ್ರಗೊಳಿಸಿ ಕೊಲೆ: ಆರೋಪಿ ಬಂಧನ

Published : 2 ಸೆಪ್ಟೆಂಬರ್ 2024, 5:30 IST
Last Updated : 2 ಸೆಪ್ಟೆಂಬರ್ 2024, 5:30 IST
ಫಾಲೋ ಮಾಡಿ
Comments

ಕಾನಹೊಸಹಳ್ಳಿ (ವಿಜಯನಗರ): ಸಮೀಪದ ತಿಪ್ಪೇಹಳ್ಳಿ ಬಳಿ‌ ಶನಿವಾರ ಮಾನಸಿಕ ಅಸ್ವಸ್ಥೆಯೊಬ್ಬರನ್ನು ವಿವಸ್ತ್ರಗೊಳಿಸಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಕಾನಹೊಸಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕೂಡ್ಲಿಗಿ ತಾಲ್ಲೂಕಿನ ಕಾತ್ರಿಕೆಹಟ್ಟಿ ಗ್ರಾಮದ ಓಬಣ್ಣ (30) ಬಂಧಿತ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಅಬ್ಬೇನಹಳ್ಳಿಯ ನೇತ್ರಮ್ಮ (30) ಎಂಬುವವರನ್ನು ಅತ್ಯಾಚಾರವೆಸಗಿ, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ ಆರೋಪದಡಿ ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ‌.ಎಲ್. ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ಸಿಪಿಐ ವೆಂಟಕಸ್ವಾಮಿ, ಪಿಎಸ್ಐ ಸಿದ್ರಾಮ ಬಿದರಾಣಿ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು‌‌.

ತಂಡದಲ್ಲಿ ಸಿಬ್ಬಂದಿ ಕೃಷ್ಣಪ್ಪ, ಕೊಟ್ರೇಶ ಅಂಗಡಿ, ವಿಜಯಕುಮಾರ್, ಮಂಜುನಾಥ, ಅಂಜನಮೂರ್ತಿ, ಕಲ್ಲೇಶ್ ಪೂಜಾರ್, ವಿಜಯ ಕುಮಾರ್, ಎನ್.ಎಂ.ಸ್ವಾಮಿ, ಸಂದೀಪ್, ಸಿದ್ದಲಿಂಗಪ್ಪ, ಚಾಲಕರಾದ ಗೌಡ್ರ ರವಿಚಂದ್ರ, ಕೃಷ್ಣಾ ನಾಯ್ಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT