ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಜನರಿಗೆ ಕಚ್ಚುತ್ತಿದ್ದ ಕೋತಿ ಕೊನೆಗೂ ಸೆರೆ

Published 7 ಜೂನ್ 2023, 16:09 IST
Last Updated 7 ಜೂನ್ 2023, 16:09 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದ ಕೆಲವೆಡೆ ಹಲವು ಜನರಿಗೆ ಕಚ್ಚಿದ್ದ ಕೆಂಪು ಮೂತಿಯ ಕೋತಿಯನ್ನು ನಗರಸಭೆ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಮಂಗಳವಾರ ಸೆರೆ ಹಿಡಿದಿದ್ದಾರೆ.

ನಗರದ ಈಶ್ವರ ನಗರದಲ್ಲಿ ಕೋತಿಯನ್ನು ಸೆರೆ ಹಿಡಿಯಲಾಯಿತು. ಕೋತಿ ಹಿಡಿಯುವ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ.

‘ಸುಮಾರು ಒಂದು ತಿಂಗಳಿಂದ ಕೋತಿ ಹಾವಳಿ ಇತ್ತು. ಕೊನೆಗೂ ದಾಳಿಕೋರ ಕೋತಿಯನ್ನು ಸೆರೆ ಹಿಡಿದಿರುವುದರಿಂದ ಜನತೆ ನೆಮ್ಮದಿ ಅನುಭವಿಸುವಂತಾಗಿದೆ. ಈ ಕಾರ್ಯಾಚರಣೆಗಾಗಿ ನಗರಸಭೆ ಮತ್ತು ಅರಣ್ಯ ಇಲಾಖೆಗೆ ಧನ್ಯವಾದ. ಆದರೆ ಇಂತಹ ಕಾರ್ಯಾಚರಣೆ ನಡೆಸಲು ಭಗತ್ ಸಿಂಗ್‌ ರಕ್ತದಾನಿಗಳ ಸಂಘವು ತೀವ್ರ ಒತ್ತಡ ಹಾಕುವ ತನಕ ಕಾದಿರುವುದು ಸರಿಯಲ್ಲ. ಸುಮಾರು 20 ಮಂದಿಗೆ ಕೋತಿ ಕಡಿಯುವ ತನಕವೂ ಸುಮ್ಮನಿದ್ದ ಆಡಳಿತ ವ್ಯವಸ್ಥೆ, ಸಂಘ ಒತ್ತಡ ಹಾಕಿದ ಬಳಿಕವಷ್ಟೇ ಕೋತಿ ಸೆರೆಗೆ ಕಾರ್ಯಾಚರಣೆ ನಡೆಸಿದ್ದು ಜಡ್ಡುಗಟ್ಟಿದ ವ್ಯವಸ್ಥೆಗೆ ಸಾಕ್ಷಿ‘ ಎಂದು ಭಗತ್‌ ಸಿಂಗ್‌ ರಕ್ತದಾನಿಗಳ ಸಂಘ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT