ಹೊಸಪೇಟೆ (ವಿಜಯನಗರ): ‘ವಾಲ್ಮೀಕಿ ನಿಗಮದ ಹಗರಣದ ಹಣವು ಲೋಕಸಭೆ ಚುನಾವಣೆಯಲ್ಲಿ ಬಳಕೆಯಾಗಿದೆ ಎಂದು ಆರೋಪಿಸಿ, ಸದಸ್ಯತ್ವ ರದ್ದತಿ ಕೋರಿ ಬಿಜೆಪಿಯವರು ಕೋರ್ಟ್‌ಗೆ ಹೋಗಲಿ. ನಾನೂ ಕಾನೂನು ಹೋರಾಟ ನಡೆಸುವೆ’ ಎಂದು ಬಳ್ಳಾರಿ ಸಂಸದ ಇ.ತುಕಾರಾಂ ತಿಳಿಸಿದರು.
‘ನಾನು ಜನರಿಂದ ಆಯ್ಕೆಯಾದವನು. ಸಂವಿಧಾನದ ಮೇಲೆ ನನಗೆ ನಂಬಿಕೆ ಇದೆ. ಅದರಂತೆ ನಡೆದುಕೊಳ್ಳುವೆ’ ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.