ಅರಸೀಕೆರೆ(ಉಚ್ಚಂಗಿದುರ್ಗ): ಅರಸೀಕೆರೆ ಸಮುದಾಯ ಆರೋಗ್ಯ ಕೇಂದ್ರ ವೈದ್ಯರ ಕೊರತೆ ಹಿನ್ನಲೆಯಲ್ಲಿ ಮಂಜೂರಾಗಿದ್ದ ಜನ ಔಷಧ ಕೇಂದ್ರ ಕೈ ತಪ್ಪಿದಂತಾಗಿದೆ ಸಂಸದ ವೈ.ದೇವೇಂದ್ರಪ್ಪ ಕಿಡಿಕಾರಿದರು.

ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅತಿ ಹೆಚ್ಚು ಜನ ಸಂಖ್ಯೆ ಹೊಂದಿರುವ ಹೋಬಳಿ ಕೇಂದ್ರ ಇದಾಗಿದ್ದು, ಬಡ ಕಾರ್ಮಿಕ ಕುಟುಂಬಗಳೇ ಅಧಿಕವಾಗಿದೆ. ಬಡವರಿಗೆ ಕಡಿಮೆ ದರದಲ್ಲಿ ಔಷಧ ಸಿಗಬೇಕು ಎನ್ನುವ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರ ಆಶಯಕ್ಕೆ ಹಿನ್ನಡೆಯಾದಂತಿದೆ. ಇದಕ್ಕೆ ಅಧಿಕಾರಿಗಳೇ ನೇರ ಹೊಣೆ ಎಂದು ಹೇಳಿದರು.

ಆಸ್ಪತ್ರೆ ಶವಗಾರ ದುರಸ್ತಿ ಕಾಮಗಾರಿ ಆರಂಭಗೊಂಡು ವರ್ಷವೇ ಕಳೆದು ಹೋದರು, ಕಾಮಗಾರಿ ಪೂರ್ಣಗೊಂಡಿಲ್ಲ ಈ ಕುರಿತ ಗ್ರಾಮಸ್ಥರು ದೂರು ಸಲ್ಲಿಸಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್ ನಿರ್ವಹಣೆಯಲ್ಲಿ ಬಳ್ಳಾರಿ ಜಿಲ್ಲೆ ಗಮನಾರ್ಹ ಸಾಧನೆ ಮಾಡಿದೆ. ಹಾಗೆಯೇ ಕೋವಿಡ್ ಲಸಿಕೆ ವಿತರಣೆಯಲ್ಲಿ ಹರಪನಹಳ್ಳಿ ತಾಲೂಕು ಪ್ರಗತಿ ಕಂಡಿದೆ.

ಕೋವಿಡ್ ರೂಪಾಂತರಿ ಓಮೈಕ್ರಾನ್ ಕಡಿವಾಣಕ್ಕೆ ಸರ್ಕಾರ ರಾತ್ರಿ ಕರ್ಪ್ಯು ಜಾರಿಗೆ ತಂದಿದೆ. ಸಾರ್ವಜನಿಕರು ಕಟ್ಟಿನಿಟ್ಟಾಗಿ ಪಾಲಿಸಿ ಸೋಂಕು ಕಡಿವಾಣಕ್ಕೆ ಸಹಕರಿಸಬೇಕು.

ಗ್ರಾಮ ದೇವತೆ ದಂಡಿನ ದುರ್ಗಮ್ಮ ಕಾರ್ತಿಕೋತ್ಸವದ ಅಂಗವಾಗಿ ನಡೆಯುವ ಜಾತ್ರೆಯನ್ನು ಸರಳ ರೀತಿಯಲ್ಲಿ ಮನೆಯಲ್ಲಿಯೇ ಆಚರಿಸಬೇಕು. ಈಗಾಗಲೇ ಸೀಮಿತ ಭಕ್ತರನ್ನೊಳಗೊಂದು ಪಾರಂಪರಿಕ ಆಚರಣೆ ಮಾಡುವಂತೆ ತಿಳಿಸಲಾಗಿದೆ. ಮುನ್ನೆಚ್ಚರಿಕ ಕ್ರಮವಾಗಿ ಅಗತ್ಯ ಸ್ವಚ್ಛತೆ, ಬಂದೋಬಸ್ತ್,ಕುರಿಯುವ ನೀರಿನ ಸೌಕರ್ಯ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ತಾಲೂಕು ವೈದ್ಯಾಧಿಕಾರಿ ಡಾ. ಹಾಲಸ್ವಾಮಿ ಮಠ, ವೈದ್ಯಾಧಿಕಾರಿ ಡಾ. ಬಸವರಾಜ್, ವೈದ್ಯೆ ಡಾ.ಶಕುಂತಲಾ ಮುಖಂಡರಾದ ವಿಶ್ವನಾಥಯ್ಯ, ಮರಿಯಪ್ಪ, ಆರೋಗ್ಯ ಸಿಬ್ಬಂದಿ ಬಾಲ ಚಂದ್ರ, ರಮೇಶ್ ಅವರೂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.