ಶನಿವಾರ, ಮೇ 28, 2022
31 °C

ನೂತನ ಪ್ರಾರ್ಥನಾ ಮಂದಿರ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ(ವಿಜಯನಗರ): ನಗರದ ಸಿಎಸ್ಐ ಕ್ರೈಸ್ತ ರಾಜ ಸಭೆ ನೂತನ ಪ್ರಾರ್ಥನಾ ಮಂದಿರವನ್ನು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಉದ್ಘಾಟಿ‌ಸಿದರು.

ಪ್ರಾರ್ಥನಾ ಮಂದಿರದ ಜೊತೆಗೆ ನೂತನ 25 ವಾಣಿಜ್ಯ ಮಳಿಗೆಗಳನ್ನು ಸಹ ಉದ್ಘಾಟಿಸಿದರು. ಚಿಕ್ಕ ಮಕ್ಕಳು ದೇವತೆಗಳ ವೇಷಧರಿಸಿ ಪ್ರಾರ್ಥನಾ ಮಂದಿರಕ್ಕೆ ಗಣ್ಯರನ್ನು ಸ್ವಾಗತಿಸಿದರು. ನಂತರ ಪಾದ್ರಿಗಳು ಪ್ರಾರ್ಥನೆ ನೆರವೇರಿ‌ಸಿದರು.

ಸಂದೀಪ್ ಸಿಂಗ್, ಧಾರವಾಡ ಕೆಎನ್‌ಡಿ ಬಿಷಪ್ ಮಾರ್ಟಿನ್, ಕಾರ್ಯದರ್ಶಿ ವಿಜಯಕುಮಾರ್, ಹಿರಿಯ ಸಭಾಪಾಲಕ ರಾಜು, ಪ್ರಾರ್ಥನಾ ಮಂದಿರದ ಕಾರ್ಯದರ್ಶಿ ಅಶೋಕ್ ಕುಮಾರ್, ಶರತ್ ಬಾಬು, ಎ.ಡೇನಿಯಲ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು