ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ–ಬಳ್ಳಾರಿ: ಭಾರಿ ಏರಿಕೆ ಕಂಡ ಪೆಟ್ರೋಲ್‌, ಡೀಸೆಲ್‌ ಬೆಲೆ

Last Updated 3 ಅಕ್ಟೋಬರ್ 2021, 10:36 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಜಯನಗರ–ಬಳ್ಳಾರಿ ಅವಳಿ ಜಿಲ್ಲೆಗಳಲ್ಲಿ ಒಂದು ವಾರದ ಅಂತರದಲ್ಲಿ ಪೆಟ್ರೋಲ್‌, ಡೀಸೆಲ್‌ ಸರಾಸರಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಹೋದ ವಾರ (ಸೆ.26) ಪ್ರತಿ ಲೀಟರ್‌ ಪೆಟ್ರೋಲ್‌ ಸರಾಸರಿ ಬೆಲೆ ₹106 ಇತ್ತು. ಈ ವಾರ ₹107.26ಕ್ಕೆ ಏರಿಕೆಯಾಗಿದ್ದು, ₹1.26 ಪೈಸೆ ಹೆಚ್ಚಳವಾಗಿದೆ. ಅದೇ ರೀತಿ ಹಿಂದಿನ ವಾರ ಡೀಸೆಲ್‌ ದರ ₹95.26 ಇತ್ತು. ಈ ವಾರ ₹97.56 ಆಗಿದ್ದು, ₹2.30 ಪೈಸೆ ಭಾರಿ ಏರಿಕೆ ಕಂಡಿದೆ.

ತೈಲ ಕಂಪನಿಗಳ ಪೆಟ್ರೋಲ್–ಡೀಸೆಲ್ ದರ ವಿವರದ ಪಟ್ಟಿ

ಪೆಟ್ರೋಲ್‌ (₹ ಪ್ರತಿ ಲೀಟರ್‌ಗೆ) ಸೆ.26 ಅ.03
ಎಚ್.ಪಿ. 105.96 107.17
ಐ.ಒ.ಸಿ. 105.99 107.25
ಬಿ.ಪಿ. 106 107.26

ಡೀಸೆಲ್‌ (₹ ಪ್ರತಿ ಲೀಟರ್‌ಗೆ)

ಸೆ.26 ಅ.03
ಎಚ್.ಪಿ. 95.22 97.47
ಐ.ಒ.ಸಿ. 95.25 97.54
ಬಿ.ಪಿ. 95.26 97.56

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT