ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಚಿನ ಕಾರ್ಯಾಚರಣೆ 24 ಗಂಟೆಯೊಳಗೆ ಅಪಹರಣಕಾರರ ಬಂಧನ

Last Updated 22 ಜುಲೈ 2022, 13:54 IST
ಅಕ್ಷರ ಗಾತ್ರ

ಕೊಟ್ಟೂರು (ವಿಜಯನಗರ ಜಿಲ್ಲೆ) : ಪಟ್ಟಣದ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಪಹರಿಸಿದ 7 ಜನ ಅಪಹರಣಕಾರರನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ವರದಿಯಾದ 24 ತಾಸಿನೊಳಗೆ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬುಧವಾರ ಬೆಳಿಗ್ಗೆ ಉದ್ಯಮಿ ಹಾಲೇಶ್ ಇವರನ್ನು ಅಪಹರಿಸಿ ₹80 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹೆದರಿದ ಉದ್ಯಮಿ ₹20ಲಕ್ಷ ಕೊಡುವುದಕ್ಕೆ ಒಪ್ಪಿಕೊಂಡಾಗ ರಾತ್ರಿ ವೇಳೆ ಪಟ್ಟಣದ ಹೊರ ವಲಯದ ಉಜ್ಜಯಿನಿ ರಸ್ತೆಯಲ್ಲಿ ಕುಟುಂಬದವರಿಂದ ಹಣ ಪಡೆದು ಹಾಲೇಶ್ ನನ್ನು ಬಿಟ್ಟು ಪರಾರಿಯಾಗಿದ್ದರು.

ಉದ್ಯಮಿ ನೀಡಿದ ದೂರಿನ ನಂತರ 3 ತಂಡಗಳನ್ನು ರಚಿಸಲಾಗಿತ್ತು. ಕ್ಷಿಪ್ರ ಕಾರ್ಯಾಚರಣೆ ನಡೆಸಿ ದಾವಣೆಗೆರೆಯಲ್ಲಿ ಅಪಹರಣಕಾರರಾದ ಮಂಜುನಾಥ್(26), ಶಾಂತಕುಮಾರ್(24), ರಾಕೇಶ್(19), ಚಿರಾಗ್(19), ಶಿವಕುಮಾರ್(21), ರಾಹುಲ್(21), ಅಲ್ತಾಫ್(23) ಇವರುಗಳನ್ನು ಬಂಧಿಸಿ ಗುರುವಾರ ರಾತ್ರಿ ಪಟ್ಟಣದ ಠಾಣೆಗೆ ಕರೆತರಲಾಗಿದೆ ಎಂದು ಮಾಹಿತಿ ಹಂಚಿಕೊಂಡರು. ಇವರಿಂದ ₹16.52ಲಕ್ಷ ಹಣ, ಕೃತ್ಯಕ್ಕೆ ಬಳಸಿದ ಕಾರು, 5ಮೊಬೈಲ್ ಗಳು, 2 ಮಚ್ಚು, 2 ಚಾಕು ವಶಪಡಿಸಿಕೊಳ್ಳಲಾಗಿದೆ ಎಂದರು.
ಡಿವೈಎಸ್ಪಿ ಜಿ.ಹರೀಶ್, ಕೊಟ್ಟೂರು ಸಿಪಿಐ ಸೋಮಶೇಖರ್ ಕೆಂಚರೆಡ್ಡಿ, ಹಗರಿಬೊಮ್ಮನಹಳ್ಳಿ ಸಿಪಿಐ ಟಿ.ಮಂಜಣ್ಣ, ಕೊಟ್ಟೂರು ಪಿಎಸ್ಐ ವಿಜಯ್ ಕೃಷ್ಣ, ಚಿತ್ತವಾಡ್ಗಿ ಪಿಎಸ್ಐ ಜಯಪ್ರಕಾಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT