ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆಯಲ್ಲಿ ಪುನೀತ್‌ ರಾಜಕುಮಾರ್‌ ಕಟೌಟ್‌ ಮೆರವಣಿಗೆ

Last Updated 16 ಮಾರ್ಚ್ 2022, 13:31 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಟ ದಿವಂಗತ ಪುನೀತ್‌ ರಾಜಕುಮಾರ್‌ ಅವರ ಜನ್ಮದಿನದ ನಿಮಿತ್ತ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.

ನಗರದ ಪ್ರಮುಖ ವೃತ್ತಗಳಲ್ಲಿ ಈಗಾಗಲೇ ಪುನೀತ್‌ ರಾಜಕುಮಾರ್‌ ಅವರ ಫ್ಲೆಕ್ಸ್‌, ಕಟೌಟ್‌ಗಳು ರಾರಾಜಿಸುತ್ತಿವೆ. ಅವರ ಜನ್ಮದಿನದಂದೇ (ಮಾ.17) ಬಹುನಿರೀಕ್ಷಿತ ‘ಜೇಮ್ಸ್‌’ ಚಿತ್ರ ಕೂಡ ತೆರೆ ಕಾಣುತ್ತಿದೆ. ನಗರದ ಬಾಲ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ. ಚಿತ್ರ ಪ್ರದರ್ಶನಕ್ಕೂ ಮುನ್ನವೇ ಚಿತ್ರಮಂದಿರ ಹಾಗೂ ಅದರ ಎದುರಿನ ರಸ್ತೆಯುದ್ದಕ್ಕೂ ಪುನೀತ್‌ ಅವರ ಪೋಸ್ಟರ್‌ಗಳು, ಫ್ಲೆಕ್ಸ್‌ಗಳು ಬುಧವಾರ ಕಂಗೊಳಿಸಿದವು. ಪುನೀತ್‌ ಅವರ ಅಭಿಮಾನಿಗಳು ಚಿತ್ರ ವೀಕ್ಷಿಸುತ್ತಲೇ ಕೇಕ್‌ ಕತ್ತರಿಸಿ ಅವರ ಜನ್ಮದಿನ ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಇನ್ನು, ಅವರ ಅಭಿಮಾನಿಗಳು ನಗರದಲ್ಲಿ ಪುನೀತ್‌ ಅವರ ಕಟೌಟ್‌ ಮೆರವಣಿಗೆ ನಡೆಸಿ, ಅದನ್ನು ಚಿತ್ರಮಂದಿರದ ಬಳಿ ಪ್ರತಿಷ್ಠಾಪಿಸಿದರು.

ಕಾಂಗ್ರೆಸ್‌ ಮುಖಂಡ ಮೊಹಮ್ಮದ್‌ ಇಮಾಮ್‌ ನಿಯಾಜಿ ಅವರು ‘ಜೇಮ್ಸ್‌’ ಚಿತ್ರ ವೀಕ್ಷಣೆಗೆ ಬರುವವರಿಗೆ ಗುರುವಾರ ಉಚಿತ ಊಟದ ವ್ಯವಸ್ಥೆ ಮಾಡಿದ್ದಾರೆ.

ಇನ್ನೊಂದೆಡೆ ನಗರದ ಪುನೀತ್‌ ರಾಜಕುಮಾರ್‌ ವೃತ್ತದಲ್ಲಿ ಅವರ ಪುತ್ಥಳಿ ಪ್ರತಿಷ್ಠಾಪನೆಗೆ ಭರದ ಸಿದ್ಧತೆಗಳು ನಡೆದಿವೆ. ಗುರುವಾರ (ಮಾ.17) ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಭೂಮಿ ಪೂಜೆ ನೆರವೇರಿಸುವರು.
ಪುನೀತ್‌ ಉತ್ಸವ:
ಫ್ರೆಂಡ್ಸ್‌ ಗ್ರುಪ್‌ ಹಂಪಿಯಿಂದ ಬುಧವಾರ ಹಂಪಿಯಲ್ಲಿ ಪುನೀತ್‌ ರಾಜಕುಮಾರ್‌ ಉತ್ಸವ ಆಚರಿಸಲಾಯಿತು. ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಎದುರು ಪುನೀತ್‌ ಭಾವಚಿತ್ರವಿಟ್ಟು ಪೂಜೆ ನೆರವೇರಿಸಲಾಯಿತು. ಬಳಿಕ ಚಿಣ್ಣರು ಕೇಕ್‌ ಕತ್ತರಿಸಿದರು. ರಥಬೀದಿಯುದ್ದಕ್ಕೂ ಅವರ ಭಾವಚಿತ್ರ ಹಾಕಲಾಗಿತ್ತು. ದೇಗುಲದಿಂದ ಪ್ರಕಾಶ್‌ ನಗರದ ವರೆಗೆ ಮೆರವಣಿಗೆ ಮಾಡಿದರು. ಪುನೀತ್‌ಗೆ ಜೈಕಾರ ಹಾಕಿದರು. ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ರವಿ ಬಾಬಾ, ರಾಮನ ಗೌಡ್ರು, ಎಸ್. ದೇವರಾಜು, ಎಚ್‌.ಗೋಪಿನಾಥ್, ಎಚ್. ಬಸವರಾಜ, ಗ್ಯಾನಿ ವೇಣು ತಳವಾರ, ಹನುಮಂತ, ಬ್ಯಾಂಕ್‌ ವಿರುಪಾಕ್ಷಿ, ಬಿ. ಶಿವು, ಸ್ವಾತಿ ಸಿಂಗ್, ರೂಪ, ರಾಜಣ್ಣ, ನಾಗರಾಜ್, ಎಚ್. ಹುಲಗಪ್ಪ ಹುಲಿಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT