ಶುಕ್ರವಾರ, ಆಗಸ್ಟ್ 6, 2021
22 °C

ಮಹಾನವಮಿ‌ ದಿಬ್ಬದ ಬಳಿ ಹೆಬ್ಬಾವು ಪ್ರತ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ(ವಿಜಯನಗರ): ತಾಲ್ಲೂಕಿನ ಹಂಪಿ ಮಹಾನವಮಿ ದಿಬ್ಬದ ಬಳಿ ಮಂಗಳವಾರ ಹೆಬ್ಬಾವು ಕಾಣಿಸಿಕೊಂಡಿದೆ.

ಈ ವಿಷಯ ತಿಳಿದ ಭದ್ರತಾ ಸಿಬ್ಬಂದಿ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಉಪ ಅರಣ್ಯ ಅಧಿಕಾರಿ ಪರಶುರಾಮ, ಅರಣ್ಯ ರಕ್ಷಕ ರವಿಚಂದ್ರ, ಉರಗತಜ್ಞ ವೇಣುಗೋಪಾಲ ಅವರು ಹೆಬ್ಬಾವು ರಕ್ಷಿಸಿ, ಬಳಿಕ ಅದನ್ನು ಸಮೀಪದ ದರೋಜಿ ಕರಡಿಧಾಮದಲ್ಲಿ ಬಿಟ್ಟಿದ್ದಾರೆ.

‘ಕೋವಿಡ್‌ ಲಾಕ್‌ಡೌನ್‌ನಿಂದ ಹಂಪಿ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಜನರ ಓಡಾಟ ಇಲ್ಲದಿರುವುದರಿಂದ ಹೆಬ್ಬಾವು ಮಹಾನವಮಿ ದಿಬ್ಬದ ಬಳಿ ಬಂದಿರುವ ಸಾಧ್ಯತೆ ಇದೆ. ನಾಲ್ಕರಿಂದ ಐದು ಅಡಿ ಉದ್ದದ ಹಾವು ಇದಾಗಿದೆ. ಹಂಪಿ ಸುತ್ತಮುತ್ತ ಕುರುಚಲು ಕಾಡು, ಬೆಟ್ಟ ಗುಡ್ಡಗಳಿರುವುದರಿಂದ ಅಲ್ಲಿನ ಪರಿಸರದಲ್ಲಿ ಅನೇಕ ಬಗೆಯ ಜೀವಜಂತುಗಳು ನೆಲೆಸಿವೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು