ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಆನಂದ್‌ ಸಿಂಗ್‌ರಿಂದ ಹಿಂದೂಗಳ ಭಾವನೆಗೆ ಧಕ್ಕೆ ಆರೋಪ

Last Updated 23 ಮಾರ್ಚ್ 2023, 16:16 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಹಂಪಿ ಸಮೀಪದ ಹಿಂದೂಗಳ ಪವಿತ್ರ ಸ್ಥಳ ನವವೃಂದಾವನದಿಂದ ಕೂಗಳತೆ ದೂರದಲ್ಲಿ ‘ರಿಕ್ರಿಯೇಷನ್‌ ಕ್ಲಬ್‌’ ಹೆಸರಲ್ಲಿ ನೈಟ್‌ ಕ್ಲಬ್‌, ರೆಸ್ಟೊರೆಂಟ್‌, ಕೆಸಿನೊ ನಿರ್ಮಿಸಲು ಮುಂದಾಗಿದ್ದಾರೆ. ರಾಜ್ಯ ಸರ್ಕಾರ ಇದಕ್ಕೆ ಅನುಮತಿ ಕೊಡಬಾರದು. ಇಲ್ಲವಾದರೆ ಹೊಸಪೇಟೆ ಬಂದ್‌ಗೆ ಕರೆ ಕೊಡಲಾಗುವುದು’ ಎಂದು ಕೊಪ್ಪಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ ರಾಜಶೇಖರ್‌ ಹಿಟ್ನಾಳ್‌ ಎಚ್ಚರಿಕೆ ನೀಡಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನವವೃಂದಾವನ ಹಿಂದೂಗಳಿಗೆ ಬಹಳ ಪವಿತ್ರ ಸ್ಥಳ. ಮನರಂಜನೆ, ವಾಣಿಜ್ಯ ಚಟುವಟಿಕೆಗಳ ಹೆಸರಿನಲ್ಲಿ ತಮ್ಮ ಪ್ರಭಾವ ಬಳಸಿಕೊಂಡು ಕ್ಲಬ್‌, ಕೆಸಿನೊ ಆರಂಭಿಸಿದರೆ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ. ಒಂಬತ್ತು ಯತಿಗಳು ಧ್ಯಾನಸ್ಥರಾದ ಆ ಪವಿತ್ರ ಸ್ಥಳಕ್ಕೆ ಹಿಂದೂಗಳು ಕುಟುಂಬ ಸಮೇತ ಹೋಗುತ್ತಾರೆ. ಕ್ಲಬ್‌ಗಳಿದ್ದರೆ ಭಕ್ತರು ಹೋಗಲು ಆಗುತ್ತದೆಯೇ? ಧಾರ್ಮಿಕವಾಗಿ ಭಾವನಾತ್ಮಕವಾಗಿ ಆನಂದ್‌ ಸಿಂಗ್‌ ಮಾತನಾಡುತ್ತಾರೆ. ಆದರೆ, ಹೀಗೆ ಮಾಡುತ್ತಿರುವುದು ಸರಿನಾ? ಎಂದು ಪ್ರಶ್ನಿಸಿದರು.

ಸರ್ವೇ ನಂಬರ್‌ 610 ರಿಂದ 615/ಬಿ ವರೆಗೆ ಒಟ್ಟು 12 ಸರ್ವೇ ನಂಬರ್‌ಗಳಲ್ಲಿ ಒಟ್ಟು 51.64 ಎಕರೆ ಜಮೀನು ಇದೆ. ಆನಂದ್‌ ಸಿಂಗ್‌ ಅವರ ಪತ್ನಿ ಲಕ್ಷ್ಮೀ ಸಿಂಗ್ ಹೆಸರಲ್ಲಿ 13 ಎಕರೆ, ಭಾಮೈದ ಧರ್ಮೇಂದ್ರ ಸಿಂಗ್‌ ಹೆಸರಲ್ಲಿ 14.59 ಎಕರೆ, ಅಬ್ದುಲ್ ರಹೀಮ್ ಸಾಬ್- 11 ಎಕರೆ, ಸುನಿತಾಬಾಯಿ ಅವರ ಹೆಸರಲ್ಲಿ 11.87 ಎಕರೆ ಜಮೀನು ಖರೀದಿಸಿದ್ದಾರೆ. ಚುನಾವಣೆಯ ಕಾವು ಏರುವ ಸಂದರ್ಭದಲ್ಲಿ ಮನರಂಜನಾ ಪಾರ್ಕ್‌ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಇದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ವಿಜಯನಗರದಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ಅದಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದರು.

ವಿಜಯನಗರ ಕ್ಷೇತ್ರದಲ್ಲಿ ಒಟ್ಟು 12 ಸಾವಿರ ಜನರಿಗೆ ಹಕ್ಕುಪತ್ರ ಕೊಡುತ್ತೇವೆ ಎಂದು ಜನರಿಂದ ₹2 ಕೋಟಿಗೂ ಅಧಿಕ ಹಣ ಆನಂದ್‌ ಸಿಂಗ್‌ ಕಡೆಯವರು ಸಂಗ್ರಹಿಸಿದ್ದಾರೆ. ಆದರೆ, 102 ಜನರಷ್ಟೇ ನೋಂದಣಿ ಮಾಡಿಸಿಕೊಂಡಿದ್ದಾರೆ. ಜಮೀನು ಇಲ್ಲದೆ ಹಕ್ಕುಪತ್ರ ಕೊಟ್ಟು ಮೋಸ ಮಾಡುತ್ತಿದ್ದಾರೆ. ಇವರಿಗೆ ಬರುವ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ. ಈ ವಿಷಯದಲ್ಲಿ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

****
‘ದೇಗುಲದ ಕಾಂಪೌಂಡ್‌ಗೊಂದು, ಸಚಿವರ ಮನೆಗೊಂದು ನಿಯಮನಾ’

‘ಹೊಸಪೇಟೆಯಲ್ಲಿ ಸಾಯಿಬಾಬಾ ದೇವಸ್ಥಾನದ ಕಾಂಪೌಂಡ್‌ ಸರ್ಕಾರಿ ಜಾಗದಲ್ಲಿದೆ ಎಂದು ಅದನ್ನು ಸಚಿವ ಆನಂದ್‌ ಸಿಂಗ್‌ ಒಡೆಸಿದರು. ಆದರೆ, ಅಲ್ಲಿ ಏನೂ ನಿರ್ಮಿಸಿಲ್ಲ. ಸಚಿವ ಆನಂದ್‌ ಸಿಂಗ್‌ ಅವರು 34 ಗುಂಟೆ ಸರ್ಕಾರಿ ಜಾಗ ಅತಿಕ್ರಮಿಸಿ ಅದರ ಮೇಲೆ ಮನೆ ಕಟ್ಟಿದ್ದಾರೆ. ಹಾಗಿದ್ದರೆ ಅದಕ್ಕೆ ನಿಯಮ ಅನ್ವಯಿಸುವುದಿಲ್ಲವೇ? ನಗರಸಭೆ ಸದಸ್ಯ ಅಬ್ದುಲ್‌ ಖದೀರ್‌ ಅವರು ಇದರ ಬಗ್ಗೆ ಸವಾಲು ಕೂಡ ಹಾಕಿದ್ದರು. ಆದರೆ, ಸಚಿವರು ಏನೂ ಹೇಳಲಿಲ್ಲ. ಇವರಿಗೆ ಕಾನೂನು ಅನ್ವಯಿಸುವುದಿಲ್ಲವೆ’ ಎಂದು ರಾಜಶೇಖರ್‌ ಹಿಟ್ನಾಳ್‌ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT