ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರ ಪ್ರದೇಶದಲ್ಲಿ ಮಂಗಳವಾರ ಸಂಜೆ ಸುಮಾರು 10 ನಿಮಿಷ ಲಘುವಾಗಿ ಮಳೆ ಸುರಿಯಿತು. ಇದರಿಂದ ಬಿಸಿಲಿನ ಝಳದಿಂದ ಬಸವಳಿದಿದ್ದ ಜನರಿಗೆ ಕೊಂಚ ನೆಮ್ಮದಿ ದೊರೆಯಿತು.

ಗುಡುಗು ಸಹಿತ ಮಳೆ ಸುರಿದಾಗ ಶಾಲೆಯಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಮಳೆ ನೀರಿನ ಸಿಂಚನವನ್ನು ಅನುಭವಿಸುತ್ತ ಖುಷಿಪಟ್ಟರು. ದ್ವಿಚಕ್ರ ವಾಹನ ಸವಾರರು ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಅಂಗಡಿ ಮುಂಗಟ್ಟುಗಳ ಮುಂದೆ ನಿಂತುಬಿಟ್ಟರು. ಕೆಲವರು ಮಳೆಯಲ್ಲೇ ಸಂಚರಿಸಿದರು.

ತುಂಗಭದ್ರಾ ಮಂಡಳಿ ಭರವಸೆ

‘ಇದು ಮುಂಗಾರು ಮಳೆ ಅಲ್ಲ, ಬೇಸಿಗೆ ಮಳೆ, ಹೀಗಾಗಿ ರೈತರು ತುಂಗಭದ್ರಾ ಅಣೆಕಟ್ಟೆಯ ಕ್ರೆಸ್ಟ್ಗೇಟ್ ಕುರಿತಂತೆ ಆತಂಕಗೊಳ್ಳಬೇಕಿಲ್ಲ, ಕ್ರೆಸ್ಟ್ಗೇಟ್ ನಿರ್ಮಾಣ ಕಾಮಗಾರಿ ನಿರಂತರ ಮುಂದುವರಿದಿದೆ. ಸದ್ಯ 18 ಗೇಟ್ಗಳ ಅಳವಡಿಕೆ ಪೂರ್ಣಗೊಂಡಿದೆ’ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.