ಹೊಸಪೇಟೆ (ವಿಜಯನಗರ): ನಗರದ ಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ ಭಾನುವಾರ ಹೊಸಪೇಟೆ ಉಪವಿಭಾಗ ವ್ಯಾಪ್ತಿಯ 134 ಮಂದಿ ರೌಡಿ ಶೀಟರ್ಗಳ ಪರೇಡ್ ನಡೆಯಿತು ಹಾಗೂ ಎಸ್ಪಿ ಶ್ರೀಹರಿಬಾಬು ಬಿ.ಎಲ್. ಅವರು ಯಾವುದೇ ರೀತಿಯಲ್ಲಿ ಅಶಾಂತಿ ಉಂಟುಮಾಡದಂತೆ ಸೂಚನೆ ನೀಡಿದರು.

ಹೊಸಪೇಟೆ ಉಪವಿಭಾಗ ವ್ಯಾಪ್ತಿಯಲ್ಲಿ 194 ಮಂದಿ ರೌಡಿಶೀಟರ್ಗಳಿದ್ದು, ಈ ಪೈಕಿ 134 ಮಂದಿ ಪರೇಡ್ನಲ್ಲಿ ಹಾಜರಾಗಿದ್ದರು. ಒಬ್ಬೊಬ್ಬರ ಮೇಲಿನ ಪ್ರಕರಣವನ್ನೂ ಪರಿಶೀಲಿಸಿದ ಎಸ್ಪಿ ಅವರು, ಸಮಾಜದಲ್ಲಿ ಶಾಂತಿ ಕದಡುವ ಯತ್ನ ಮಾಡಿದರೆ ಶಿಸ್ತಿನ ಕ್ರಮ ನಿಶ್ಚಿತ ಎಂದು ಎಚ್ಚರಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ಪಿ, ‘ಜಿಲ್ಲೆಯಲ್ಲಿ 641 ರೌಡಿ ಶೀಟರ್ಗಳಿದ್ದಾರೆ, ಈ ಪೈಕಿ 591 ಮಂದಿಯನ್ನು ಸಂಪರ್ಕಿಸಿ, ಸಮಾಜವಿರೋಧಿ ಚಟುವಟಿಕೆಗಳಲ್ಲಿ ತೊಡಗದಂತೆ ಸೂಚಿಸಲಾಗಿದೆ. ಹೊಸಪೇಟೆ ಉಪವಿಭಾಗದಂತೆ ಹರಪನಹಳ್ಳಿ ಮತ್ತು ಕೂಡ್ಲಿಗಿ ಉಪವಿಭಾಗಗಳಲ್ಲಿ ಸಹ ಇಂತಹದೇ ಪರೇಡ್ ನಡೆಸಲಾಗುತ್ತಿದೆ’ ಎಂದರು.

ದಿಢೀರ್ ಪರೇಡ್ಗೆ ಕಾರಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠರ ಸಭೆ ನಡೆಸಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದರು. ಅದರಂತೆ ಎಸ್ಪಿ ಅವರಿಂದ ಈ ಪರೇಡ್ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.