ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಮಾರ್ಟ್‌ ರೂಂ ಸಾಮಗ್ರಿ ಖರೀದಿಗೆ ದೇಣಿಗೆ ನೀಡಿದ ನಿವೃತ್ತ ಶಿಕ್ಷಣಾಧಿಕಾರಿ

Published : 22 ಸೆಪ್ಟೆಂಬರ್ 2024, 14:03 IST
Last Updated : 22 ಸೆಪ್ಟೆಂಬರ್ 2024, 14:03 IST
ಫಾಲೋ ಮಾಡಿ
Comments

ಕೊಲ್ಹಾರ: ತಾಲ್ಲೂಕಿನ ಕುಪಕಡ್ಡಿಯ ನಿವೃತ್ತ ಶಿಕ್ಷಣಾಧಿಕಾರಿ ಸಿದ್ದಪ್ಪ ಉಗ್ರಾಣ, ತಮ್ಮೂರಿನ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಲು ಅನುಕೂಲವಾಗುವ ನಿಟ್ಟಿನಲ್ಲಿ ಸ್ಮಾರ್ಟ್ ರೂಂಗೆ ಅಗತ್ಯವಾದ ಸಾಮಗ್ರಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

ತಾವು ಕಲಿತ ಶಾಲೆಗೆ ಸೇವಾ ಮನೋಭಾವದ ದೃಷ್ಟಿಯಿಂದ ಸ್ಮಾರ್ಟ್ ರೂಂನ ಸೌಲಭ್ಯಗಳಿಗಾಗಿ ₹1.5 ಲಕ್ಷ ವೆಚ್ಚದಲ್ಲಿ ಪ್ರೊಜೆಕ್ಟರ್, ಪರದೆ, ಸೌಂಡ್ ಸಿಸ್ಟಮ್, ಲ್ಯಾಪ್‌ಟಾಪ್, ಟೇಬಲ್, ಮ್ಯಾಟ್, ಕಿಟಕಿ ಪರದೆ ಸೇರಿದಂತೆ ಸಂಪೂರ್ಣವಾಗಿ ಅತ್ಯುತ್ತಮ ಸೌಲಭ್ಯಗಳನ್ನು ಒಳಗೊಂಡ ಸಾಮಗ್ರಿಗಳನ್ನು ದೇಣಿಯಾಗಿ ನೀಡಿದ್ದಲ್ಲದೆ, ತಾವೇ ಮುಂದೆ ನಿಂತು ಸ್ಮಾರ್ಟ್ ರೂಂ ನಿರ್ಮಿಸಿ ಗ್ರಾಮಸ್ಥರ ಪ್ರೀತಿಗೆ ಪಾತ್ರರಾಗಿದ್ದಾರೆ.

ಅವರ ಸೇವೆಗೆ ಗ್ರಾಮದ ಹಿರಿಯರು, ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಶಿಕ್ಷಣ ಸಂಯೋಜಕ ವಿಜಯೇಂದ್ರ ಪುರೋಹಿತ, ಸಿ.ಆರ್.ಪಿ.ಗಳಾದ ಸಂಗಮೇಶ ಜಂಗಮಶೇಟ್ಟಿ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮುರಿಗೇಶ ಹಳ್ಳಿ, ಮುಖ್ಯಶಿಕ್ಷಕ ಸಿದ್ದು ಕೋಟ್ಯಾಳ ಸೇರಿದಂತೆ ಸರ್ವ ಸಿಬ್ಬಂದಿ ಅಭಿನಂದನೆ ಸಲ್ಲಿಸಿದರು.

ನಮ್ಮ ಬದುಕನ್ನು ಕಟ್ಟಿಕೊಟ್ಟಿ ಈ ದೇವಾಲಯಕ್ಕೆ ನನ್ನ ಕೈಯಿಂದ ಸ್ವಲ್ಪ ಕಾಣಿಕೆ ನೀಡಿದ್ದು ನನಗೆ ಮತ್ತು ನನ್ನ ಕುಟುಂಬಕ್ಕೆ ತುಂಬಾ ಖುಷಿಯಾಗಿದೆ. ನಮ್ಮೂರ ಶಾಲೆ ಸುಂದರವಾಗಿದ್ದರೆ ನಮ್ಮ ಮಕ್ಕಳಿಗೆ ಅದುವೇ ಬೆಳಕಾಗುತ್ತದೆ ಎಂದು ಸಿದ್ದಪ್ಪ ಉಗ್ರಾಣ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT