ಹೊಸಪೇಟೆ (ವಿಜಯನಗರ): ನಗರದ ಕ್ಯಾಥೋಲಿಕ್ ಚರ್ಚ್ ಬಾಗಿಲು ಮುರಿದು ದೇವರನ್ನು ಆರಾಧಿಸುವ ದೇವರ ಪ್ರಸಾದ ಇರಿಸುವ ಗೂಡನ್ನು ಕಳ್ಳರು ಕದ್ದೊಯ್ದಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಥೇಟ್ ಚಿನ್ನದ ಲೇಪನ ಮಾಡಿದಂತೆ ಗೂಡು ಭಾಸವಾಗುತ್ತದೆ. ಇದರ ಮೌಲ್ಯ ಅಂದಾಜು ₹50 ಸಾವಿರ ಎಂದು ಗೊತ್ತಾಗಿದೆ. ವ್ಯಕ್ತಿಯೊಬ್ಬರು ಅದನ್ನು ತಲೆ ಮೇಲೆ ಇಟ್ಟುಕೊಂಡು ಕದ್ದೊಯ್ಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚರ್ಚ್ನಲ್ಲಿ ಯಾರೂ ಇಲ್ಲದ ವೇಳೆ ಘಟನೆ ನಡೆದಿದೆ.
ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಚರ್ಚ್ನಲ್ಲಿ ಈ ಹಿಂದೆಯೂ ಕಳ್ಳತನವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.