ಸೋಮವಾರ, ಜೂನ್ 27, 2022
21 °C
ಕೋವಿಡ್‌ನಿಂದ ಇಬ್ಬರು ಮಕ್ಕಳು, ಹೃದಯಾಘಾತದಿಂದ ತಂದೆ ಸಾವು

ಒಂಬತ್ತು ದಿನದೊಳಗೆ ಒಂದೇಕುಟುಂಬದ ಮೂವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ(ವಿಜಯನಗರ): ಒಂಬತ್ತು ದಿನಗಳ ಅಂತರದೊಳಗೆ ಒಂದೇ ಕುಟುಂಬದ ಮೂವರು ನಗರದಲ್ಲಿ ಮೃತಪಟ್ಟಿದ್ದಾರೆ.

ಒಂಬತ್ತು ದಿನಗಳ ಹಿಂದೆ ನಗರದ ಸೋವಿಯೊ ಸ್ಮಿತ್‌ ನಿಧನರಾಗಿದ್ದರು. ಅದರ ಮರುದಿನ ಅವರ ಹಿರಿಯ ಸಹೋದರಿ, ಸಮಾಜ ಸೇವಕಿ ಕ್ಯಾರೋಲಿನ್ ಲೂಸಿಯಾ ಸ್ಮಿತ್ ಮರಣ ಹೊಂದಿದ್ದರು. ಇಬ್ಬರು ಕೋವಿಡ್‌ನಿಂದ ಮೃತಪಟ್ಟಿದ್ದರು.

ಇಬ್ಬರು ಮಕ್ಕಳ ಅಗಲಿಕೆಯ ನೋವಿನಿಂದ ಶುಕ್ರವಾರ ರಾತ್ರಿ ಬೇರಿ ಸ್ಮಿತ್‌ (72) ಹೃದಯಾಘಾತದಿಂದ ನಿಧನರಾಗಿದ್ದಾರೆ. ಶನಿವಾರ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು