ಗುರುವಾರ , ಮೇ 13, 2021
24 °C

ಕೂಡ್ಲಿಗಿ: ಸಿಡಿಲಿಗೆ ನಾಲ್ವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಡಿಲು–ಸಾಂದರ್ಭಿಕ ಚಿತ್ರ

ಕೂಡ್ಲಿಗಿ: ತಾಲ್ಲೂಕಿನಲ್ಲಿ ಮಂಗಳವಾರ ಮಧ್ಯಾಹ್ನ ಸಿಡಿಲು ಬಡಿದು ನಾಲ್ವರು ಮೃತಪಟ್ಟಿದ್ದಾರೆ.

ನೆಲಬೊಮ್ಮನಹಳ್ಳಿಯ ಚಿನ್ನಪ್ಪ(40), ವೀರಣ್ಣ(50), ಎಂ.ಬಿ. ಅಯ್ಯನಹಳ್ಳಿಯ ಬಿ. ಪತ್ರೆಪ್ಪ(43) ಹಾಗೂ ಹರವದಿ ಗ್ರಾಮದ ರಾಜಶೇಖರ(32) ಮೃತರು.

ಮಂಗಳವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಭಾರಿ ಗಾಳಿ ಮಳೆ ಆರಂಭವಾಗಿದೆ. ಇದರಿಂದ ನೆಲಬೊಮ್ಮನಹಳ್ಳಿಯ ಚಿನ್ನಪ್ಪ ಹಾಗೂ ವೀರಣ್ಣ ಗ್ರಾಮದ ಕಾಡಪ್ಪರ ಹೊಲದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದಾಗ ಮಳೆ ಆರಂಭವಾಗಿದ್ದು, ಇಬ್ಬರು ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಎಂ.ಬಿ. ಅಯ್ಯನಹಳ್ಳಿಯ ಬಿ. ಪತ್ರೆಪ್ಪ ಮಾಳಿಗೆ ಮೇಲಿನ ಗವಾಕ್ಷಿ ಮುಚ್ಚಲು ಹೋದಾಗ ಸಿಡಿಲು ಬಡಿದಿದೆ.

ಹರವದಿ ಗ್ರಾಮದ ರಾಜಶೇಖರ ಸೂಲದಹಳ್ಳಿಯಿಂದ ತನ್ನ ಗ್ರಾಮಕ್ಕೆ ಹೋಗುವಾಗ ಕ್ಯಾಸನಕೆರೆ ಬಳಿ  ಸಿಡಿಲು ಬಡಿದಿದೆ. ಎಲ್ಲರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.  ಕಂದಾಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು