ಶನಿವಾರ, ಮೇ 15, 2021
27 °C

ಸಿಡಿಲಿಗೆ ಮರಗಳು ಭಸ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಟ್ಟೂರು (ವಿಜಯನಗರ ಜಿಲ್ಲೆ): ತಾಲ್ಲೂಕಿನ‌‌ ಮಂಗಾಪುರ ಗ್ರಾಮದಲ್ಲಿ ಗುರುವಾರ ಸಂಜೆ ಸಿಡಿಲಿಗೆ ತೆಂಗಿನ ಮರಗಳು ಸುಟ್ಟಿವೆ.
ಗ್ರಾಮದ ಬಣಕಾರ ಶರಣಪ್ಪ, ಕಪ್ಲಿ ಸಿದ್ದೇಶಪ್ಪ, ಮರುಳಸಿದ್ದಪ್ಪ ಅವರ ಮನೆಯ ಆವರಣದಲ್ಲಿರುವ ತೆಂಗಿನ‌ ಮರಗಳು ಸಿಡಿಲಿಗೆ ಸುಟ್ಟು ಹೋಗಿವೆ.

ವಿಷಯ ತಿಳಿದು ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.‌

ತಾಲ್ಲೂಕಿನದ್ಯಾಂತ ಮೋಡ ಕವಿದ ವಾತಾವರಣದೊಂದಿಗೆ ಗುಡುಗು, ಸಿಡಿಲಿನ ಆರ್ಭಟವಿದೆ. ಉಜ್ಜಯನಿಯಲ್ಲಿ ಕೆಲಕಾಲ ಮಳೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು