ಹೊಸಪೇಟೆ (ವಿಜಯನಗರ): ‘ತುಂಗಭದ್ರಾ ಅಣೆಕಟ್ಟೆಯಲ್ಲಿ ಮೇ ಅಂತ್ಯದ ವೇಳೆಗೆ ಎಲ್ಲ 33 ಕ್ರೆಸ್ಟ್ಗೇಟ್ ಹಾಗೂ ಹೊಸ ಚೈನ್ಲಿಂಕ್ ಅಳವಡಿಕೆ ಕಾರ್ಯ ಪೂರ್ಣವಾಗಲಿದೆ’ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಇಲ್ಲಿ ಹೇಳಿದರು.

ಅಣೆಕಟ್ಟೆಯಲ್ಲಿ ಶುಕ್ರವಾರ ಕಾಮಗಾರಿಗಳ ಪರಿಶೀಲಿಸಿದ ಅವರು ಬಳಿಕ ಮಾತನಾಡಿ, ‘ಸದ್ಯ 18 ಗೇಟ್ಗಳ ಅಳವಡಿಕೆ ಮುಗಿದಿದೆ.ಈ ತಿಂಗಳಲ್ಲಿ 23 ಗೇಟ್ಗಳ ಅಳವಡಿಕೆ ಆಗಲಿದೆ. ಉಳಿದ 10 ಗೇಟ್ಗಳನ್ನು ಮೇ ಅಂತ್ಯದೊಳಗೆ ಅಳವಡಿಸಲಾಗುವುದು ಎಂದರು.

‘ಜೂನ್ನಿಂದ ಮಳೆ ಬಂದು ಜಲಾಶಯ ಭರ್ತಿಯಾಗಿ ರೈತರಿಗೆ ಈ ಹಿಂದಿನಂತೆಯೇ ನೀರು ಲಭಿಸುವ ನಿರೀಕ್ಷೆ ಇದೆ’ ಎಂದು ಹೇಳಿದರು.

‘ಜಲಾಶಯದಲ್ಲಿ ಹೂಳು ತುಂಬಿ 28 ಟಿಎಂಸಿ ಅಡಿಯಷ್ಟು ನೀರು ನಿಲ್ಲುವ ಸಾಮರ್ಥ್ಯ ಕಡಿಮೆಯಾಗಿದೆ. ಇದಕ್ಕಾಗಿ ನವಲಿಯಲ್ಲಿ ಸಮಾನಾಂತರ ಜಲಾಶಯ ನಿರ್ಮಿಸಲು ಆಂಧ್ರ ಸರ್ಕಾರಕ್ಕೆ ಒತ್ತಾಯಿಸುತ್ತಲಿದ್ದೇವೆ. ತೆಲಂಗಾಣ ಜತೆಗಿನ ವಿವಾದ ಬಗೆಹರಿದ ಬಳಿಕ ಆಂಧ್ರಪ್ರದೇಶ ಮುಖ್ಯಮಂತ್ರಿ ರಾಜ್ಯದ ಜೊತೆ ಚರ್ಚಿಸುವ ನಿರೀಕ್ಷೆಯಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.