ಹೊಸಪೇಟೆ (ವಿಜಯನಗರ): ‘ತುಂಗಭದ್ರಾ ಅಣೆಕಟ್ಟೆಯ ಕೊನೆಯ ಕ್ರೆಸ್ಟ್ಗೇಟ್ ಅಳವಡಿಕೆ ಕಾಮಗಾರಿ ಆರಂಭವಾಗಿದೆ. ಪ್ರತಿ ವರ್ಷವೂ ಸಮರ್ಪಕವಾಗಿ ನಿರ್ವಹಿಸಿದರೆ, ಗೇಟ್ಗಳು 70 ವರ್ಷ ಬಾಳಿಕೆ ಬರಲಿವೆ’ ಎಂದು ಕ್ರೆಸ್ಟ್ಗೇಟ್ ತಜ್ಞ ಕನ್ಹಯ್ಯ ನಾಯ್ಡು ಮಂಗಳವಾರ ಹೇಳಿದರು.

ಗೇಟ್ ಅಳವಡಿಕೆ ಕಾಮಗಾರಿ ವೀಕ್ಷಿಸಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾನು ರಾಷ್ಟ್ರೀಯ ಅಣೆಕಟ್ಟೆ ಸುರಕ್ಷತಾ ಪ್ರಾಧಿಕಾರ ಸದಸ್ಯನಾಗಿದ್ದು, ಸುರಕ್ಷತೆ ಬಗ್ಗೆ ಪ್ರಮಾಣಪತ್ರ ನೀಡಿದ್ದೇನೆ’ ಎಂದರು.

‘33 ಗೇಟ್ಗಳ ಪೈಕಿ 26 ಗೇಟ್ಗಳ ಅಳವಡಿಕೆ ಪೂರ್ಣಗೊಂಡಿದ್ದು, 15 ಗೇಟ್ಗಳ ಪರೀಕ್ಷೆ ನಡೆಸಲಾಗಿದೆ. ಕೆಲ ಗೇಟ್ಗಳಿಗೆ ಸ್ಲಿಮ್ ಪ್ಲೇಟ್ ಅಳವಡಿಸಲಾಗುತ್ತಿದೆ. ಮೇ 11ರ ವೇಳೆಗೆ ಚೆನ್ನೈಯಿಂದ ಚೈನ್ಲಿಂಕ್ ಬರಲಿದೆ. 15ರೊಳಗೆ ಚೈನ್ ಅಳವಡಿಕೆ ಹೊರತುಪಡಿಸಿ, ಉಳಿದ ಕೆಲಸಗಳೂ ಪೂರ್ಣಗೊಂಡಿರುತ್ತವೆ’ ಎಂದರು.

‘ಜಲಾಶಯದಲ್ಲಿ ನೀರು ಭರ್ತಿ ಇದ್ದಾಗಲೂ ಚೈನ್ಲಿಂಕ್ ಅಳವಡಿಕೆ ಮಾಡಬಹುದು. ಹೀಗಾಗಿ ಮೇ ಮಧ್ಯಭಾಗದಲ್ಲಿ ಭಾರಿ ಮಳೆ ಸುರಿದರೂ ಈ ಬಾರಿ ಅಣೆಕಟ್ಟೆಯಲ್ಲಿ ನೀರು ಸಂಗ್ರಹವಾಗಲಿದೆ’ ಎಂದರು.

‘ಒಟ್ಟಾರೆ ಕಾಮಗಾರಿಗೆ ₹51 ಕೋಟಿ ವೆಚ್ಚವಾಗಿದೆ. ಗೇಟ್ಗಳಿಗೆ ₹44 ಕೋಟಿ, ಚೈನ್ಲಿಂಕ್ಗೆ ₹5.1 ಕೋಟಿ ಮತ್ತು ಸಲಹೆಗೆ ₹1.34 ಕೋಟಿ ವೆಚ್ಚವಾಗಿದೆ. ಈವರೆಗೆ ₹29.5 ಕೋಟಿ ಹಣವನ್ನು ಗುತ್ತಿಗೆದಾರರಿಗೆ ಪಾವತಿಸಲಾಗಿದೆ’ ಎಂದು ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ ತಿಳಿಸಿದರು.

ಅಧೀಕ್ಷಕ ಎಂಜಿನಿಯರ್ ನಾರಾಯಣ ನಾಯ್ಕ, ಎಂಜಿನಿಯರ್ಗಳಾದ ಜ್ಞಾನೇಶ್ವರ್ ಮತ್ತು ಕಿರಣ್ ಇದ್ದರು.

ಗೇಟ್ ಕಾಮಗಾರಿಗೆ ತೃಪ್ತಿ ವ್ಯಕ್ತಪಡಿಸಿದ ಕನ್ಹಯ್ಯ ನಾಯ್ಡು

ತನ್ನ ಆಕ್ಷೇಪ, ಬಳಿಕ ಕರ್ನಾಟಕ ಹಣ ಬಿಡುಗಡೆ ಮಾಡಿದ್ದನ್ನು ಸ್ಮರಿಸಿದ ತಜ್ಞ

ಕೆಲಸಕ್ಕೆ ಅಡ್ಡಿ ತರದ ಮಾಧ್ಯಮಗಳಿಗೂ ಕೃತಜ್ಞತೆ

ವಾರ್ಷಿಕ 11 ಗೇಟ್ಗಳಂತೆ 3 ವರ್ಷಕ್ಕೊಮ್ಮೆ ಎಲ್ಲ ಗೇಟ್ಗಳ ನಿರ್ವಹಣೆ ನಡೆಯುತ್ತದೆ. ಸಮರ್ಪಕವಾಗಿ ನಿರ್ವಹಣೆ ಮಾಡಿದಲ್ಲಿ ಸುದೀರ್ಘ ಅವಧಿ ಬಾಳಿಕೆ ಬರಲಿದೆ
ಕನ್ಹಯ್ಯ ನಾಯ್ಡು ಕ್ರೆಸ್ಟ್ಗೇಟ್ ತಜ್ಞ

100 ಟಿಎಂಸಿ ಅಡಿ ನೀರು ಸಂಗ್ರಹ ‘133 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ 31 ಟಿಎಂಸಿ ಅಡಿಯಷ್ಟು ಹೂಳು ಇರಬಹುದು. 102 ಟಿಎಂಸಿ ಅಡಿ ನೀರು ಸಂಗ್ರಹಿಸಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ನಾವು ಗರಿಷ್ಠ 100 ಟಿಎಂಸಿ ನೀರು ಸಂಗ್ರಹದ ಲೆಕ್ಕಾಚಾರ ಮಾಡಿದ್ದೇವೆ’ ಎಂದು ಕನ್ಹಯ್ಯ ನಾಯ್ಡು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.