ಹೊಸಪೇಟೆ: ‘ತುಂಗಭದ್ರಾ ಅಣೆಕಟ್ಟೆಗೆ ಎಲ್ಲ 33 ಕ್ರೆಸ್ಟ್ಗೇಟ್ಗಳ ಅಳವಡಿಕೆ ಮುಗಿದಿದೆ. ಮೇ 15ರ ವೇಳೆಗೆ ನವೀಕೃತ ಅಣೆಕಟ್ಟೆ ಉದ್ಘಾಟನೆಗೆ ಸಜ್ಜಾಗಲು ಸೂಚಿಸಲಾಗಿದೆ’ ಎಂದು ಜಲಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ.ಶಿವಕುಮಾರ್ ಇಲ್ಲಿ ಹೇಳಿದರು.

ಭಾನುವಾರ ಅಣೆಕಟ್ಟೆಗೆ ಭೇಟಿ ನೀಡಿ, ಕ್ರೆಸ್ಟ್ಗೇಟ್ ಅಳವಡಿಕೆ ಕಾಮಗಾರಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಸದ್ಯ, ಅಣೆಕಟ್ಟೆ ಎತ್ತರ ಎತ್ತರಿಸುವ ಪ್ರಶ್ನೆ ಇಲ್ಲ’ ಹೂಳು ತೆಗೆಯಲು ಚೀನಾ ತಂತ್ರಜ್ಞಾನ ಬಳಕೆಯ ಬಗ್ಗೆ ಚರ್ಚೆ ನಡೆಯುತ್ತಿದೆ’ ಎಂದು ತಿಳಿಸಿದರು.

‘ಸದ್ಯ ಅಣೆಕಟ್ಟೆಯಲ್ಲಿ 33 ಟಿಎಂಸಿ ಅಡಿ ಹೂಳು ತುಂಬಿದೆ. ಇದನ್ನು ಸರಿದೂಗಿಸಲು ನವಲಿ ಸಮಾನಾಂತರ ಜಲಾಶಯ, ಹೂಳು ತೆಗೆಸುವುದು ಹಾಗೂ ಅಣೆಕಟ್ಟೆಯ ಕೆಳಭಾಗದಲ್ಲಿ ಪ್ರವಾಹ ನೀರು ಪಂಪ್ ಮಾಡುವ ಪ್ರತ್ಯೇಕ ಯೋಜನೆಗಳಿವೆ. ನವಲಿ ಜಲಾಶಯದ ಯೋಜನೆ ಸಂಬಂಧಿಸಿ ಆಂಧ್ರ ಸಿಎಂ ಜತೆಗೆ ಚರ್ಚೆಗೆ ಸರ್ಕಾರ ಸಿದ್ಧವಿದೆ’ ಎಂದು ತಿಳಿಸಿದರು.

‘ಹೂಳು ತೆಗೆಯುವ ಯೋಜನೆಯಲ್ಲಿ ಕೆಲ ಖಾಸಗಿಯವರಿಗೆ ಲಾಭವಾದರೆ ಚಿಂತೆಯಿಲ್ಲ. ಸರ್ಕಾರ ಇದಕ್ಕಾಗಿ ದೊಡ್ಡ ಮೊತ್ತ ವ್ಯಯಿಸಲು ಸಾಧ್ಯವಿಲ್ಲ. ಪ್ರವಾಹದ ನೀರನ್ನು ಪಂಪ್ ಮಾಡಿ ಸಂಗ್ರಹಿಸುವ ಸ್ಥಳದ ಬಗ್ಗೆ ಈಗಲೇ ತಿಳಿಸಲಾಗದು’ ಎಂದು ಹೇಳಿದರು.

ಸವಾಲು ಗೆದ್ದಿದ್ದೇವೆ: ‘33 ಕ್ರೆಸ್ಟ್ಗೇಟ್ ಅಳವಡಿಕೆ ಕುರಿತು ದೊಡ್ಡ ಸವಾಲು ಗೆದ್ದಿದ್ದೇವೆ. ₹54 ಕೋಟಿ ವೆಚ್ಚವಾಗಿದೆ. ಕಾಲುವೆಗಳ ದುರಸ್ತಿ, ಇತರೆ ಕಾಮಗಾರಿಗಳಿಗೆ ₹315 ಕೋಟಿ ವ್ಯಯಿಸಲಾಗಿದೆ. ತಜ್ಞರ ವರದಿಯಂತೆ ದುರಸ್ತಿಯಿಂದಾಗಿ ಅಣೆಕಟ್ಟೆಯ ಬಾಳಿಕೆ ಅವಧಿ 50 ವರ್ಷ ಮುಂದುವರಿದಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸನ್ಮಾನ: ‘ಕ್ರೆಸ್ಟ್ಗೇಟ್ ಕಳಚಿದ್ದರಿಂದಾಗಿ ನಾಲ್ಕು ಜಿಲ್ಲೆಗಳ ರೈತರು ಒಂದು ಬೆಳೆಯನ್ನು ತ್ಯಾಗ ಮಾಡಿ ಗೇಟ್ ಅಳವಡಿಕೆಗೆ ಸಹಕರಿಸಿದ್ದಾರೆ. ಕಾಮಗಾರಿ ಪೂರ್ಣಗೊಂಡ ನಂತರ ಈ ಭಾಗದ ರೈತರನ್ನು ಆಹ್ವಾನಿಸಿ ಸನ್ಮಾನಿಸಲಾಗುವುದು’ ಎಂದರು.

ಸಚಿವರಾದ ಕೆ.ಎಚ್.ಮುನಿಯಪ್ಪ, ಈಶ್ವರ ಖಂಡ್ರೆ, ಶಿವರಾಜ ಎಸ್.ತಂಗಡಗಿ, ಸಂಸದರಾದ ಇ.ತುಕಾರಾಂ, ರಾಜಶೇಖರ ಹಿಟ್ನಾಳ, ಶಾಸಕರಾದ ಎಚ್.ಆರ್.ಗವಿಯಪ್ಪ, ಡಾ.ಎನ್.ಟಿ.ಶ್ರೀನಿವಾಸ್, ಲತಾ ಮಲ್ಲಿಕಾರ್ಜುನ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ, ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ ಇತರರು ಇದ್ದರು.

ಕ್ರೆಸ್ಟ್ಗೇಟ್ ಬದಲಾವಣೆ: ₹54 ಕೋಟಿ ವೆಚ್ಚ ಮೇ 7ರ ವೇಳೆಗೆ ಕೆಲ ಚೈನ್ಲಿಂಕ್ ಆಗಮನ ತಿಂಗಳಾಂತ್ಯಕ್ಕೆ ಎಲ್ಲ ಕಾಮಗಾರಿ ಪೂರ್ಣ

ಕಡತ ವಿಲೇವಾರಿಗೆ ಸೂಚನೆ ‘ನಾನಾ ಇಲಾಖೆಗಳಲ್ಲಿ 86 ಸಾವಿರ ಕಡತಗಳ ವಿಲೇವಾರಿಗೆ ಬಾಕಿ ಇರುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಆಗಿದೆ. ಇಲಾಖಾವಾರು ವರದಿ ತರಿಸಿಕೊಂಡು ಕಡತ ವಿಲೇವಾರಿ ಮಾಡಲಾಗುವುದು’ ಎಂದು ಡಿಸಿಎಂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.