ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ ಹೊಸ 12 ಕ್ರೆಸ್ಟ್ಗೇಟ್ಗಳಿಗೆ ಚೈನ್ ಅಳವಡಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನೂ ನಾಲ್ಕು ಗೇಟ್ಗಳಿಗೆ ಚೈನ್ ಅಳವಡಿಸುವ ಪ್ರಕ್ರಿಯೆ ಮುಂದುವರೆದಿದೆ.

‘ಚೆನ್ನೈಯಿಂದ ಈವರೆಗೆ 22 ಗೇಟ್ಗಳಿಗೆ ಚೈನ್ ಬಂದಿವೆ. ಉಳಿದ ಚೈನ್ಗಳು ಶೀಘ್ರವೇ ತಲುಪಲಿವೆ. ಜೂನ್ 15ರೊಳಗೆ ಎಲ್ಲಾ 33 ಗೇಟ್ಗಳಿಗೆ ಹೊಸ ಚೈನ್ ಅಳವಡಿಸುವ ಗುರಿಯಿದೆ’ ಎಂದು ತುಂಗಭದ್ರಾ ಮಂಡಳಿಯ ಸೆಕ್ಷನ್ ಎಂಜಿನಿಯರ್ ಕಿರಣ್ ತಿಳಿಸಿದ್ದಾರೆ.

ಒಳಹರಿವು ಬಂದ್: ತುಂಗಭದ್ರಾ ಜಲಾನಯನ ಪ್ರದೇಶಗಳಲ್ಲಿ ಮಳೆ ಸುರಿದಿದ್ದರಿಂದ ಮೇ 19ರಿಂದ ಜಲಾಶಯಕ್ಕೆ ಒಳಹರಿವು ಆರಂಭವಾಗಿತ್ತು. ಆದರೆ, ಮತ್ತೆ ಮಳೆ ಕಡಿಮೆಯಾದ ಕಾರಣ ಜೂನ್ 1ರಿಂದ ಒಳಹರಿವು ಸಂಪೂರ್ಣ ಬಂದ್ ಆಗಿದೆ. ಸದ್ಯ ಜಲಾಶಯದಲ್ಲಿ 10 ಟಿಎಂಸಿ ಅಡಿ ನೀರಿನ ಸಂಗ್ರಹ ಇದೆ. ಕಳೆದ ವರ್ಷ ಇದೇ ವೇಳೆ 19.77 ಟಿಎಂಸಿ ಅಡಿ ನೀರಿನ ಸಂಗ್ರಹ ಇತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-51-1564990454

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.