ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದಲ್ಲಿ 33 ಟಿಎಂಸಿ ಅಡಿಯಷ್ಟು ಹೂಳು ತುಂಬಿದ್ದು, ಬಳ್ಳಾರಿ ರೈತ ಸಂಘದ ನೇತೃತ್ವದಲ್ಲಿ ರೈತರು ಮಂಗಳವಾರ ಹೂಳು ತೆಗೆಯುವ (ಎತ್ತುವ) ಕಾರ್ಯ ಕೈಗೊಂಡರು. ಗುಂಡಾ ಸಸ್ಯೋದ್ಯಾನ ಸಮೀಪದ ಹಿನ್ನೀರು ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಿವಿಧ ಗ್ರಾಮಗಳ ರೈತರು ಭಾಗಿಯಾದರು.

ಕಂಪ್ಲಿ, ಕುರುಗೋಡು, ಸಿರುಗುಪ್ಪ ಭಾಗದಿಂದ ಬಂದ ರೈತರು, ಎರಡು ಜೆಸಿಬಿ ಮೂಲಕ ಹೂಳು ತೆಗೆದರು. ತೆಗೆದ ಹೂಳನ್ನು 60ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳಲ್ಲಿ ತುಂಬಿಸಿಕೊಂಡು ಊರುಗಳಿಗೆ ಮರಳಿದರು.

‘2017ರಲ್ಲಿ ಹೂಳು ತೆಗೆಯುವ ಜಾತ್ರೆ ಒಂದು ತಿಂಗಳು ನಡೆದಿತ್ತು. ಆಗ ಹೂಳು ತೆಗೆಯುಲು ಸರ್ಕಾರ ನಿರಾಕರಿಸಿತು. ನವಲಿಯಲ್ಲಿ ಸಮಾನಾಂತರ ಜಲಾಶಯ ನಿರ್ಮಿಸುವ ಬಗ್ಗೆ ಭರವಸೆ ನೀಡಿತ್ತು. ಆದರೆ, ಒಂಬತ್ತು ವರ್ಷಗಳಾದರೂ ಅದರ ಲಕ್ಷಣ ಕಾಣುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತರಲು ಸಾಂಕೇತಿಕವಾಗಿ ಹೂಳು ತೆಗೆದಿದ್ದೆವು. ಈಗಲಾದರೂ ಸರ್ಕಾರವು ನಮ್ಮ ಬೇಡಿಕೆಗೆ ಸ್ಪಂದಿಸಿ, ಹೂಳು ತೆಗೆಸಲಿ’ ಎಂದು ಬಳ್ಳಾರಿ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಹೇಳಿದರು.

ಗಂಗಾಪೂಜೆ ನೆರವೇರಿಸಿ, ಜೆಸಿಬಿ ಯಂತ್ರದಿಂದ ಟ್ರ್ಯಾಕ್ಟರ್ಗೆ ಹೂಳು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದ ಕೊಟ್ಟೂರುಸ್ವಾಮಿ ಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ನೀರಿನ ವಿಚಾರದಲ್ಲಿ ಸರ್ಕಾರಗಳು ಕಾಳಜಿ ವಹಿಸದೆ ಇರುವುದು ದುರದೃಷ್ಟಕರ, ರೈತರು ತಮ್ಮ ಭವಿಷ್ಯವನ್ನು ತಾವೇ ಭದ್ರಪಡಿಸಿಕೊಳ್ಳಬೇಕಾದ ಅಗತ್ಯ ಎದುರಾಗಿದೆ ಎಂದರು.

2017ರ ಹೂಳಿನ ಜಾತ್ರೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಂದಿಪುರ ಮಠದ ಮಹೇಶ್ವರ ಸ್ವಾಮೀಜಿ ಮಾತನಾಡಿ, ‘ಮುಂದಿನ ವರ್ಷ ಫೆಬ್ರುವರಿಯಲ್ಲಿಯೇ ಈ ಜಾತ್ರೆ ನಡೆಸುವ ಸಾಧ್ಯತೆ ಇದೆ. ಆಗ ಸಾವಿರಾರು ರೈತರು ಟ್ರ್ಯಾಕ್ಟರ್ನೊಂದಿಗೆ ಇಲ್ಲಿಗೆ ಬಂದು ಹೂಳು ಒಯ್ಯಲು ಪ್ರೋತ್ಸಾಹಿಸುವೆ’ ಎಂದರು.

ಹೂಳು ತೆಗೆದ ಸ್ಥಳದಲ್ಲೇ ರೈತರಿಗೆ ಗೋಧಿ ಹುಗ್ಗಿ ಊಟ ಬಡಿಸಿ ಅವರನ್ನು ಊರಿಗೆ ಕಳುಹಿಸಿಕೊಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-51-570790377

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.