ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದ ಹೂಳು ತೆಗೆಯುವ ವಿಚಾರದಲ್ಲಿ ಹಣ ಮಾಡುವ ಯಾವ ಉದ್ದೇಶವೂ ಇಲ್ಲ. ಎಲ್ಲವೂ ಪಾರದರ್ಶಕವಾಗಿಯೇ ನಡೆಯುತ್ತಿದೆ. ಯಾವುದೇ ವೇದಿಕೆಯಲ್ಲಿ ಇದರ ಬಗ್ಗೆ ಚರ್ಚಿಸಲು ಸಿದ್ಧ ಎಂದು ಬಳ್ಳಾರಿ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ದರೂರು ಹೇಳಿದರು.

ಇಲ್ಲಿಗೆ ಸಮೀಪ ಗುಂಡಾ ಸಸ್ಯೋದ್ಯಾನ ಬಳಿ ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಹೂಳಿನ ಜಾತ್ರೆ ಮಂಗಳವಾರ ನಡೆದಿತ್ತು. ಇದರ ಬಗ್ಗೆ ಕೆಲವರು ಆಕ್ಷೇಪ, ಶಂಕೆ, ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಅವರು ಈ ಸವಾಲು ಹಾಕಿದ್ದಾರೆ.

‘ರೈತರ ನಿಜವಾದ ಬವಣೆಯನ್ನು ಬಿಂಬಿಸುವುದಷ್ಟೇ ನನ್ನ ಉದ್ದೇಶ. ಜಲಾಶಯದಲ್ಲಿನ ಹೂಳು ತೆಗೆಯದೆ ಇದ್ದರೆ ಭವಿಷ್ಯ ಬಹಳ ಕರಾಳವಾಗಲಿದೆ. ಇದೀಗ ಸಾಂಕೇತಿಕವಾಗಿ ಪ್ರತಿಭಟನೆ ನಡೆದಿದೆ. ಇನ್ನು ಮುಂದೆ ರಾಜ್ಯ ಸಹಿತ ಆಂಧ್ರ, ತೆಲಂಗಾಣ ಸಿಎಂಗಳ ಜತೆಗೆ, ಕೇಂದ್ರದ ಜಲ ಆಯೋಗದ ಜತೆಗೆ ಹಾಗೂ ಕೇಂದ್ರ ಸರ್ಕಾರದ ಜತೆಗೆ ಮಾತುಕತೆ ನಡೆಸಿ ಹೂಳಿನ ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಲಾಗುತ್ತದೆ’ ಎಂದು ಪುರುಷೋತ್ತಮ ಗೌಡ ಹೇಳಿದರು.

ಎಲ್ಲವೂ ಪಾರದರ್ಶಕ: ಹೂಳಿನ ಜಾತ್ರೆ ವಿಚಾರದಲ್ಲಿ ಎಲ್ಲವೂ ಪಾರದರ್ಶಕವಾಗಿದೆ. ಸುಮಾರು ₹4 ಲಕ್ಷದಷ್ಟು ಖರ್ಚಾಗಿದೆ. ಸಿರುಗುಪ್ಪ ರೈಸ್ಮಿಲ್ ಅಸೋಸಿಯೇಷನ್ನವರು ₹2.80 ಲಕ್ಷ, ಬಳ್ಳಾರಿ ರೈಸ್ಮಿಲ್ ಅಸೋಸಿಯೇಷನ್ನವರು ₹60 ಸಾವಿರ ದೇಣಿಗೆ ನೀಡಿದ್ದರು. ಅದೇ ಹಣದಲ್ಲಿ ಟ್ರ್ಯಾಕ್ಟರ್ಗಳಿಗೆ ಡೀಸೆಲ್ ಹಾಕಿ ಹೂಳು ಎತ್ತಿಕೊಂಡು ಹೋಗಿದ್ದೇವೆ. ಊಟ, ಶಾಮಿಯಾನಕ್ಕೆ ₹1 ಲಕ್ಷದಷ್ಟು ವೆಚ್ಚ ತಗುಲಿದೆ. ಹೆಚ್ಚುವರಿ ವೆಚ್ಚವನ್ನು ರೈತರೇ ಭರಿಸುತ್ತಿದ್ದೇವೆ ಎಂದು ಅವರು ವಿವರಿಸಿದರು.

‘ಹೂಳಿನ ಜಾತ್ರೆಯ ಬಗ್ಗೆ ಸಂಶಯ ಇರುವ ಯಾರೇ ಆದರೂ ಸೂಕ್ತ ವೇದಿಕೆಗೆ ಕೆರೆದರೆ ಬರಲು ನಾನು ಸಿದ್ಧ. ಈ ಹಿಂದೆಯೂ ಇಂತಹದೇ ಅಪಪ್ರಚಾರ ನಡೆದ ಕಾರಣ ಹೂಳಿನ ಸಮಸ್ಯೆ ಹಾಗೆಯೇ ಉಳಿಯಿತು. ನನ್ನ ಮೇಲೆಯೂ ಅನಗತ್ಯ ಆರೋಪ ಕೇಳಿಬಂತು. ಮತ್ತೆ ಅಂತಹದೇ ವಾತಾವರಣ ಸೃಷ್ಟಿಸುವ ಯತ್ನ ನಡೆದಿದೆ, ಇದಕ್ಕೆ ನಾನು ಅಧೀರನಾಗುವುದಿಲ್ಲ’ ಎಂದು ಪುರುಷೋತ್ತಮ ಗೌಡ ಸ್ಪಷ್ಟಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-25-679857755

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.