ಕೊಟ್ಟೂರು: ತಾಲ್ಲೂಕಿನ ಉಜ್ಜಯಿನಿ ಸದ್ಧರ್ಮ ಪೀಠದಲ್ಲಿ ಮರುಳಸಿದ್ಧೇಶ್ವರ ಸ್ವಾಮಿ ಶಿಖರ ತೈಲಾಭಿಷೇಕ ಬುಧವಾರ ಸಡಗರದಿಂದ ಜರುಗಿತು.

ದಕ್ಷಿಣ ಭಾರತದಲ್ಲಿಯೇ ವಿಶಿಷ್ಠವಾಗಿ ನಡೆಯುವ ಗರ್ಭಗುಡಿಯ ಶಿಖರ ತೈಲಾ ಭಿಷೇಕವನ್ನು ವೀಕ್ಷಿಸಲು ರಾಜ್ಯ ಹಾಗೂ ಹೊರರಾಜ್ಯಗಳಿಂದ ಅಸಂಖ್ಯಾತ ಭಕ್ತರು ಕಣ್ಣು ತುಂಬಿಕೊಂಡರು. ಸಂಪ್ರ ದಾಯದಂತೆ ಕೂಡ್ಲಿಗಿ ತಾಲ್ಲೂಕಿನ ಜರಿಮಲೆ ಪಾಳೇಗಾರರ ವಂಶಸ್ಧರು ತೈಲ ಕುಂಭವನ್ನು ಹೊತ್ತು ಸಕಲ ಮಂಗಳವಾದ್ಯ ಮೇಳಗಳೊಂದಿಗೆ ಪಾದಯಾತ್ರೆಯ ಮೂಲಕ ಪೀಠದ ದ್ವಾರಬಾಗಿಲಿಗೆ ಬಂದಾಗ ಪೀಠಾಧೀಶರ ನೇತೃತ್ವದಲ್ಲಿ ಅರ್ಚಕ ಬಳಗ ಪಾಳೆಗಾ ರರನ್ನು ಸ್ವಾಗತಿಸಿ, ತೈಲ ಕುಂಭಕ್ಕೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಕುಂಭ ವನ್ನು ಸ್ವೀಕರಿಸಿದರು.

ಪಾಳೇಗಾರರು ತಂದ ಕುಂಭದ ತೈಲವನ್ನು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿಸಿ ಶಿಖರಕ್ಕೆ ಎರೆಯುತ್ತಿದ್ದಂತೆ ನೆರೆದ ಅಪಾರ ಭಕ್ತರ ಜಯಘೋಷ ಮೊಳಗಿತು. ನಂತರ ಹರಕೆ ಹೊತ್ತ ಭಕ್ತರು ತಂದ ತೈಲವನ್ನು ಶಿಖರಕ್ಕೆ ಎರೆಯುತ್ತಿದ್ದಂತೆ ನೆರದ ಭಕ್ತರು ಬಾಳೆಹಣ್ಣು, ಉತ್ತುತ್ತಿ ಹಾಗೂ ದವನ ತೂರಿ ಭಕ್ತಿ ಸಮರ್ಪಿಸಿದರು.

ಭಕ್ತರು ತಮ್ಮ ಕೋರಿಕೆಗಳು ಈಡೇರಿದಲ್ಲಿ ಸ್ವಾಮಿಯ ಶಿಖರಕ್ಕೆ ತೈಲ ಎರೆಯುವುದಾಗಿ ಹರಕೆ ಹೊತ್ತಿರುತ್ತಾರೆ. ಬೇಡಿಕೆ ಈಡೇರಿದ ಭಕ್ತ ಸಮೂಹ ಕಾಣಿಕೆಯಾಗಿ ಅರ್ಪಿಸಿದ ತೈಲದಿಂದ ಶಿಖರಕ್ಕೆ ಮಜ್ಜನ ಮಾಡಲಾಯಿತು.

ಆಶೀರ್ವಚನ ನೀಡಿದ ಪೀಠಾ ಧೀಶರು ಈ ವರ್ಷ ಸಕಾಲಕ್ಕೆ ಮಳೆ ಬೆಳೆ ಲಭಿಸಲಿ ಎಂದು ಹಾರೈಸಿದರು. ಕಾಶಿ ಪೀಠಾಧೀಶರು ಹಾಗೂ ವಿವಿಧ ಮಠಾ ಧೀಶರುಗಳು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-25-641395063

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.