ಕೊಟ್ಟೂರು: ತಾಲ್ಲೂಕು ಕೇಂದ್ರವೆಂದು ಕೊಟ್ಟೂರು ಪಟ್ಟಣವನ್ನು ಕಳೆದ ಆರೇಳು ವರ್ಷಗಳ ಹಿಂದೆ ಘೋಷಿಸಿದರೂ ತಾಲ್ಲೂಕು ಕಚೇರಿಯ ನಾಮಫಲಕಕ್ಕೆ ಮಾತ್ರ ಸೀಮಿತಗೊಂಡಿದೆ. ಸರ್ಕಾರದ ಸೌಲಭ್ಯಗಳಿಂದ ತಾಲ್ಲೂಕಿನ ಜನತೆ ಇಂದಿಗೂ ವಂಚಿತರಾಗಿದ್ದಾರೆ ಎಂದು ಸಾರ್ವಜನಿಕರ ಪರವಾಗಿ ಉದ್ಯಮಿ ಅಕ್ಕಿ ಚಂದ್ರಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವ್ಯಾಪಾರ ವಹಿವಾಟಿಗೆ ಪ್ರಸಿದ್ಧಿಯಾದ ಕೊಟ್ಟೂರಿನ ಜನತೆ ಆಸ್ತಿಗಳ ಕೊಡು ಕೊಳ್ಳುವಿಕೆಗೆ ಕೂಡ್ಲಿಗಿ ಉಪನೋಂದಣಿ ಕಚೇರಿಗೆ ಅಲೆಯುವಂತಹ ಪರಿಸ್ಥಿತಿ ಇದೆ. ಕೂಡ್ಲಿಗಿ ಕಚೇರಿಯಲ್ಲಿ ಕಾರ್ಯಾಭಾರ ಹೆಚ್ಚಾಗುವುದರಿಂದ ಸಾರ್ವಜನಿಕರಿಗೆ ತೀವ್ರ ಆಡಚಣೆ ಉಂಟಾಗಿದೆ. ಅಲ್ಲದೇ ಕೊಟ್ಟೂರು ತಾಲ್ಲೂಕಿನ ನೋಂದಣಿ ಕಾರ್ಯ ಹೆಚ್ಚಾಗಿದ್ದರೂ ಇಲಾಖೆ ಕೊಟ್ಟೂರಿನಲ್ಲಿ ಕಚೇರಿ ತೆರೆಯಲು ಮೀನ ಮೇಷ ಎಣಿಸುತ್ತಿದೆ.
ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಳೆದ ನಾಲ್ಕೈದು ವರ್ಷಗಳಿಂದ ನಿರಂತರವಾಗಿ ಸರ್ಕಾರದ ಗಮನ ಸೆಳೆಯಲು ಹೋರಾಟ ಮಾಡಿದರೂ ಫಲಪ್ರದವಾಗಿಲ್ಲ. ಕೂಡಲೇ ಸರ್ಕಾರ ಉಪ ನೋಂದಣಿ ಕಚೇರಿ ತೆರೆಯದಿದ್ದರೆ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟಿಸುವುದಾಗಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.