ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಗಡ್ಕರಿ ಹೊಗಳಿದ್ದ ಸುರಂಗ ಮಾರ್ಗದಲ್ಲಿ ಮತ್ತೆ ಜಿನುಗುತ್ತಿದೆ ನೀರು

‘ನವಭಾರತದ ವಿಸ್ಮಯಗಳಲ್ಲಿ ಒಂದು’ ಎಂದು ಟ್ವೀಟ್‌ ಮಾಡಿದ್ದ ಗಡ್ಕರಿ
Last Updated 5 ಆಗಸ್ಟ್ 2022, 10:01 IST
ಅಕ್ಷರ ಗಾತ್ರ

ಹೊಸಪೇಟೆ: ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರ ಮೇಲಿನ ಸುರಂಗ ಮಾರ್ಗದಲ್ಲಿ ಪುನಃ ಮಳೆ ನೀರು ಜಿನುಗುತ್ತಿದೆ.

ಹೋದ ವರ್ಷವೂ ಭಾರಿ ಮಳೆ ಸುರಿದಾಗ ಸುರಂಗ ಮಾರ್ಗದಲ್ಲಿ ನೀರು ಸೋರಿಕೆಯಾಗುತ್ತಿತ್ತು. ಒಳಗಿನ ವಿದ್ಯುತ್‌ ದೀಪಗಳು ಹಾಳಾಗಿ ಕತ್ತಲೆ ಆವರಿಸಿಕೊಂಡಿತ್ತು. ಈ ಕುರಿತು ‘ಪ್ರಜಾವಾಣಿ’ ವರದಿ ಪ್ರಕಟಿಸಿದಾಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ದುರಸ್ತಿ ಮಾಡಿದ್ದರು. ವರ್ಷ ಕಳೆಯುವುದರೊಳಗೆ ಮತ್ತೆ ನೀರು ಸೋರುತ್ತಿದೆ.

ಹೊಸಪೇಟೆ ಹೆಬ್ಬಾಗಿಲಿನಂತಿರುವ ಸುರಂಗ ಮಾರ್ಗವೂ ಈ ಭಾಗದಲ್ಲಿನ ಆಕರ್ಷಣೀಯ ಸ್ಥಳವಾಗಿದೆ. ಇದಕ್ಕೆ ಹೊಂದಿಕೊಂಡಂತೆ ತುಂಗಭದ್ರಾ ಜಲಾಶಯದ ಹಿನ್ನೀರು, ಸುತ್ತಲೂ ಕಣಿವೆಗಳು ಇರುವುದರಿಂದ ನೋಡಲು ಎರಡು ಕಣ್ಣುಗಳು ಸಾಲದು. ಅದರ ಮೇಲ್ಭಾಗದಿಂದ ರೈಲುಗಳು ಸಂಚರಿಸಿದಾಗ ಮತ್ತಷ್ಟು ಸುಂದರವಾಗಿ ಗೋಚರಿಸುತ್ತದೆ. ಈ ಮಾರ್ಗದಿಂದ ಹೋಗುವ ಹೆಚ್ಚಿನವರು ಕೆಲನಿಮಿಷ ವಾಹನಗಳಿಂದ ಇಳಿದು ಸೆಲ್ಫಿ, ಛಾಯಾಚಿತ್ರ ತೆಗೆದುಕೊಳ್ಳುತ್ತಾರೆ.ಆದರೆ, ನೀರು ಸೊರುತ್ತಿರುವುದರಿಂದ ಒಳಭಾಗದಲ್ಲಿ ಹಾಸು ಹಿಡಿಯುತ್ತಿದೆ. ಅದರ ಅಂದ ಕೆಡುತ್ತಿದೆ.

ಬೆಂಗಳೂರು, ಮಂಗಳೂರು, ವಿಜಯಪುರ, ಸೊಲ್ಲಾಪುರ, ಪುಣೆ ಸೇರಿದಂತೆ ಪ್ರಮುಖ ನಗರಗಳಿಗೆ ಈ ಸುರಂಗ ಮಾರ್ಗ ಕೊಂಡಿಯಾಗಿದೆ.

ಸುರಂಗ ಮಾರ್ಗದ ಗೋಡೆಗಳ ಮೂಲಕ ಮಳೆ ನೀರು ಹರಿಯುತ್ತಿದೆ
ಸುರಂಗ ಮಾರ್ಗದ ಗೋಡೆಗಳ ಮೂಲಕ ಮಳೆ ನೀರು ಹರಿಯುತ್ತಿದೆ

‘ಹೊಸಪೇಟೆ ಸುರಂಗ ಮಾರ್ಗವೂ ನವಭಾರತದ ವಿಸ್ಮಯಗಳಲ್ಲಿ ಒಂದಾಗಿದೆ’ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಇತ್ತೀಚೆಗೆ ಇದರ ಛಾಯಾಚಿತ್ರಗಳೊಂದಿಗೆ ಟ್ವೀಟ್‌ ಮಾಡಿದ್ದರು. ಅದಾದ ಕೆಲವೇ ದಿನಗಳಲ್ಲಿ ನೀರು ಸೋರಲಾರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT